ಹಾಸನ: ಕಳೆದ ಒಂದೂವರೆ ತಿಂಗಳಿನಿಂದ ಎಣ್ಣೆ ಅಂಗಡಿ ಬಾಗಿಲು ಮುಚ್ಚಿದ್ದು ಇಂದಿನಿಂದ ವ್ಯಾಪಾರಕ್ಕೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮದ್ಯದಂಗಡಿ ಬಾಗಿಲಿಗೆ ಶ್ರದ್ಧೆ, ಭಕ್ತಿಯಿಂದ ಪೂಜೆ ಮಾಡಿ ಗಮನಸೆಳೆದರು.
ಹಾಸನ ನಗರದ ಸಾಲಗಾಮೆ ರಸ್ತೆ, ಸಹ್ಯಾದ್ರಿ ಚಿತ್ರಮಂದಿರ ಬಳಿ ಇರುವ ಎಂ.ಎಸ್.ಐ.ಎಲ್. ಮದ್ಯದಂಗಡಿಗೆ ಬಳಿ ಧಾವಿಸಿದ ಕೆಲ ಮದ್ಯ ಪ್ರಿಯರು, ಮೊದಲು ತೆಂಗಿನಕಾಯಿ ಹೊಡೆದು ಕುಂಕುಮ ಹಚ್ಚಿದರು. ಮಲ್ಲಿಗೆ ಹೂವನ್ನು ಹಾಕಿ ನಮನ ಸಲ್ಲಿಸಿದರು. ಇದನ್ನೂ ಓದಿ: ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?
Advertisement
Advertisement
ಕೇವಲ ಪೂಜೆ ಮಾಡದೇ ಮದ್ಯದ ಹೆಸರನ್ನು ದೇವರ ನಾಮದಂತೆ ಪಠಿಸಿ ನಮನ ಸಲ್ಲಿಸಿದರು. ಇನ್ನು ಮುಂದೆ ಯಾವ ಸಂದರ್ಭದಲ್ಲೂ ಎಣ್ಣೆ ಅಂಗಡಿ ಬಾಗಿಲು ಹಾಕದಂತೆ ಪೂಜೆ ವೇಳೆ ಬೇಡಿಕೊಂಡರು.