ನವದೆಹಲಿ: ಟೀಂ ಇಂಡಿಯಾ ಕ್ರಿಕೆಟರ್ ಶಮಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬರ್ತಿದೆ. ಮ್ಯಾಚ್ ಫಿಕ್ಸಿಂಗ್ನಲ್ಲಿ ಪಾಲ್ಗೊಳ್ಳುವ ಮೂಲಕ ಶಮಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಅಂತ ಸ್ವತಃ ಶಮಿ ಪತ್ನಿ ಹಸೀನ್ ಜಹಾನ್ ಆರೋಪ ಮಾಡಿದ್ದಾರೆ.
ಶಮಿ ನನಗೆ ದ್ರೋಹ ಎಸಗಿದಂತೆ ದೇಶಕ್ಕೂ ದ್ರೋಹ ಎಸಗಬಹುದು. ಪಾಕಿಸ್ತಾನದ ಅಲಿಶಾ ಎಂಬ ಯುವತಿಯಿಂದ ಶಮಿ ಹಣ ಸ್ವೀಕರಿಸಿದ್ದಾನೆ. ಇಂಗ್ಲೆಂಡ್ನ ಮಹಮ್ಮದ್ ಭಾಯ್ ಮೂಲಕ ಶಮಿಗೆ ಫಿಕ್ಸಿಂಗ್ ಹಣ ಸಿಕ್ಕಿದೆ. ಮ್ಯಾಚ್ ಫಿಕ್ಸಿಂಗ್ ಸಂಬಂಧ ನನ್ನ ಬಳಿ ಎಲ್ಲಾ ಸಾಕ್ಷ್ಯ ಇದೆ. ಇನ್ನಷ್ಟು ಸಾಕ್ಷ್ಯ ಬೇಕಿದ್ರೆ ದುಬೈಗೆ ತೆರಳಿ ತನಿಖೆ ಮಾಡಿ ಅಂತಾ ಶಮಿ ಪತ್ನಿ ಆರೋಪ ಮಾಡಿದ್ದಾರೆ.
Advertisement
Advertisement
ಈ ಬಗ್ಗೆ ಶಮಿ ಹಾಗೂ ಆತನ ಕುಟುಂಬದ ವಿರುದ್ಧ ಹಸೀನ್ ಕೊಲ್ಕತ್ತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಪತ್ನಿಗೆ ಕಿರುಕುಳ, ಅಕ್ರಮ ಸಂಬಂಧ ಆರೋಪ ನಿರಾಕರಿಸಿದ ಮಹಮದ್ ಶಮಿ
Advertisement
ಪತಿ ಶಮಿಗೆ ಇಬ್ಬರೊಂದಿಗೆ ಅಕ್ರಮ ಸಂಬಂಧ ಇದೆ ಅಂತಾ ಹಸೀನ್ ಜಹಾನ್ ಬುಧವಾರದಂದು ದೂರಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ಲಾಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ. ಈ ಕುರಿತು ಶಮಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ತನ್ನ ಗೌರವಕ್ಕೆ ಧಕ್ಕೆ ತರಲು ಈ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದರು.