- ಪಾಪಿಗಳ ಬಣ್ಣ ಬಯಲಿಗೆ ಜೀವಂತವಾಗಿ ಹಿಡಿಯಲು ಸೇನೆ ಪಣ
ಶ್ರೀನಗರ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ (Pahalgam Terror Attack) ಭಾಗಿಯಾಗಿದ್ದ ಹಾಶಿಮ್ ಮೂಸಾ (Hashim Moosa) ಪಾಕಿಸ್ತಾನದ (Pakistan) ಮಾಜಿ ಕಮಾಂಡೋ ಎಂದು ಸೇನೆಯ ಮೂಲಗಳು ತಿಳಿಸಿವೆ.
ಪಹಲ್ಗಾಮ್ ದಾಳಿ ಬಳಿಕ ಹಾಶಿಮ್ ಮೂಸಾ ದಕ್ಷಿಣ ಕಾಶ್ಮೀರದ ಕಾಡಿನಲ್ಲಿ ಅಡಗಿಕೊಂಡಿದ್ದಾನೆ. ಆತನ ಪತ್ತೆಗೆ ಸೇನೆ ಕಾರ್ಯಾಚರಣೆ ಪ್ರಾರಂಭಿಸಿದೆ. ಈಗಾಗಲೇ ಉಗ್ರರ ದಾಳಿ ನಡೆಸಿದ್ದ ಹಾಗೂ ಸಂಚು ರೂಪಿಸಿದವರ ಮೂವರು ಭಯೋತ್ಪಾದಕರನ್ನು ಭದ್ರತಾ ಸಂಸ್ಥೆಗಳು ಗುರುತಿಸಿವೆ. ಅದರಲ್ಲಿ ಹಾಶಿಮ್ ಮೂಸಾ ಕೂಡ ಒಬ್ಬನಾಗಿದ್ದಾನೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ – ಪಾಕ್ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ
ಹಶೀಮ್ ಮೂಸಾನನ್ನು ಜೀವಂತವಾಗಿ ಬಂಧಿಸುವ ಉದ್ದೇಶವಿದೆ. ಇದರಿಂದ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ಸಾಬೀತು ಮಾಡಲು ಸಹಕಾರಿಯಾಗುತ್ತದೆ. ಆತ ಪಾಕಿಸ್ತಾನದ ವಿಶೇಷ ಪಡೆಯಲ್ಲಿ ಪ್ಯಾರಾ-ಕಮಾಂಡೋ ಆಗಿ ಸೇವೆ ಸಲ್ಲಿಸಿದ್ದಾನೆ. ನಂತರ ಲಷ್ಕರ್-ಎ-ತೈಬಾವನ್ನು ಸೇರಿಕೊಂಡಿದ್ದ. 2023ರಲ್ಲಿ ಆತ ಭಾರತಕ್ಕೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ.
ಅಡಗಿರುವ ಹಾಶಿಮ್ ಮೂಸಾ ಪಾಕಿಸ್ತಾನಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾನೆ. ಅವನ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಅಲ್ಲದೇ ಮಾಹಿತಿದಾರನ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಭದ್ರತಾ ಪಡೆಗಳು ತಿಳಿಸಿವೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಗಂಡರ್ಬಲ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಶೀಮ್ ಮೂಸಾ ಭಾಗಿಯಾಗಿದ್ದ. ಈ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದರು. ಬಾರಾಮುಲ್ಲಾದಲ್ಲಿ ನಡೆದ ದಾಳಿಯಲ್ಲಿ ಸಹ ಆತ ಭಾಗಿಯಾಗಿದ್ದು, ಇದರಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಕಾಶ್ಮೀರದಲ್ಲಿ ನಡೆದ ಕನಿಷ್ಠ ಆರು ಭಯೋತ್ಪಾದಕ ದಾಳಿಗಳಲ್ಲಿ ಹಾಶಿಮ್ ಮೂಸಾ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಭಾರತದಿಂದ ಪಾಕ್‌ಗೆ ಮೆಡಿಸಿನ್ ಬಂದ್ – ಔಷಧವಿಲ್ಲದೆ ಕೆಲಸ ತೊರೆಯಲು ಮುಂದಾಗ್ತಿರೋ ವೈದ್ಯರು!