ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆಯ ದರ್ಶನವನ್ನು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.
ಹಾಸನಾಂಬೆ ತಾಯಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ದೇವಿಯ ದರ್ಶನ ನನಗೆ ಸಂತಸ ತಂದಿದೆ. ರಾಜ್ಯದ ಪ್ರಸಿದ್ಧ ದೇವಾಯಗಳಲ್ಲಿ ಹಾಸನಾಂಬೆ ದೇವಾಲಯವೂ ಕೂಡ ಒಂದು. ಈಗಷ್ಟೇ ಕೊರೊನಾ ಎಂಬ ಸಂಕಷ್ಟದಿಂದ ಹೊರಬಂದಿದ್ದೇವೆ. ದೇವಿಯ ಆರ್ಶಿವಾದ ನಮ್ಮ ವಂಶಸ್ಥರ ಮೇಲೆ ಮತ್ತು ನಾಡಿನ ಜನತೆ ಮೇಲೆ ಇರಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ನುಡಿದರು. ಇದನ್ನೂ ಓದಿ: ವಿದೇಶಿ ಒರಾಂಗೂಟಾನ್‍ಗಳಿಗೆ ಮೈಸೂರು ZOOನಲ್ಲಿ 1.2 ಕೋಟಿ ರೂ. ವೆಚ್ಚದ ಹೊಸ ಮನೆ!
ಅಕ್ಟೋಬರ್ 26 ರಿಂದ ನ.6 ರವರೆಗೆ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದ್ದು, ಈ ಬಾರಿ 9 ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಲಿದ್ದಾಳೆ. ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಯುವರತ್ನನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಅಮೂಲ್