ಹಾಸನ: ನವೆಂಬರ್ 2 ರಿಂದ ಆರಂಭವಾಗಿದ್ದ ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಮಧ್ಯಾಹ್ನ 12 ಗಂಟೆ ನಂತರ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಆ ಮೂಲಕ ಬರೋಬ್ಬರಿ 12 ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ನೀಡಿದ ಹಾಸನಾಂಬೆ (Hassanamba) ಮತ್ತೆ ಒಂದು ವರ್ಷಗಳ ಕಾಲ ಮರೆಗೆ ಸರಿಯಲಿದ್ದಾಳೆ.
ಹಾಸನಾಂಬೆ ಬಾಗಿಲು ಮುಚ್ಚುವ ಮುನ್ನಾ ದಿನವಾದ ಮಂಗಳವಾರ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು. ನಿನ್ನೆ ಇಡೀ ದಿನ ದೇವಾಲಯದ (Temple) ಒಳ-ಹೊರಗು ಆಗಮಿಕರಿಂದ ತುಂಬಿ ತುಳುಕುತ್ತಿತ್ತು. ನಿನ್ನೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಮಾಜಿ ಸಚಿವ ವಿಜಯ್ ಶಂಕರ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಹಾಸನಾಂಬೆ ದೇವಿ ದರ್ಶನ ಪಡೆದರು.
Advertisement
Advertisement
ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಹಲವು ದಾಖಲೆಗಳು ನಿರ್ಮಾಣ ಆಗಿದೆ. ಈ ಬಾರಿ 13.5 ಲಕ್ಷಕ್ಕೂ ಹೆಚ್ಚಿನ ಭಕ್ತರು ದೇವಿ ದರ್ಶನ ಪಡೆದಿದ್ದರೆ. ನಿನ್ನೆ ಬೆಳಗ್ಗೆ 6 ಗಂಟೆಯವರೆಗೆ ವಿಶೇಷ ದರ್ಶನದ 1,000 ರೂ., 300 ರೂ. ಹಾಗೂ ಲಾಡು ಪ್ರಸಾದ ಮಾರಾಟದಿಂದ 5,79,56,460 ರೂ. ಹಣ ಸಂಗ್ರಹವಾಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಇಂದು ಮಧ್ಯಾಹ್ನ 12 ಗಂಟೆ ಬಳಿಕ ವಿಶ್ವರೂಪ ದರ್ಶನದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ, ಶಾಸಕ ಸ್ವರೂಪ್‌ಪ್ರಕಾಶ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗುತ್ತದೆ. ಇದನ್ನೂ ಓದಿ: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಗಾವಿಗೆ ವಿಸ್ತರಣೆ
Advertisement
Advertisement
ಈವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಶಕ್ತಿ ದೇವತೆಯ ದರ್ಶನಕ್ಕಾಗಿ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ಇಂದು ಮಧ್ಯಾಹ್ನ ದೇವಿಗೆ ಅಲಂಕಾರ ಮಾಡಿದ್ದ ಒಡವೆಗಳನ್ನು ತೆಗೆದು ಪೂಜೆ ಸಲ್ಲಿಸಿ, ದೀಪ ಹಚ್ಚಿ, ದೇವಿಯ ಮುಂದೆ ಹೂವು, ನೈವೇದ್ಯ ಇಟ್ಟು ಗಣ್ಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿ ಬಂದ್ ಮಾಡಲಿದ್ದು, ಒಂದು ವರ್ಷ ಕಾಲ ಹಾಸನಾಂಬೆ ತೆರೆ ಮರೆಗೆ ಸರಿಯಲಿದ್ದಾಳೆ. ಇದನ್ನೂ ಓದಿ: 25+ ಸ್ಥಾನ ಗೆಲ್ಲಲು ವಿಜಯೇಂದ್ರ ಮುಂದಿರುವ ಸವಾಲು ಏನು?