– 2025ರ ಅ.9 ರಿಂದ ಅ.23 ರವರೆಗೆ ಜಾತ್ರಾ ಮಹೋತ್ಸವ
ಹಾಸನ: ಹಾಸನಾಂಬಾ ದೇವಿಯ (Hasanamba Temple) ಗರ್ಭಗುಡಿ ಬಾಗಿಲನ್ನು ಮಧ್ಯಾಹ್ನ 12:33ಕ್ಕೆ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಈ ಮೂಲಕ 11 ದಿನಗಳ ಹಾಸನಾಂಬೆ ಜಾತ್ರಾ (Hasanamba Jatra) ಮಹೋತ್ಸವಕ್ಕೆ ತೆರೆ ಬಿದ್ದಿದೆ.
ದೇವಾಲಯದ ಗರ್ಭಗುಡಿಯನ್ನು ಶಾಸಕ ಹೆಚ್.ಪಿ ಸ್ವರೂಪ್‍ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಸಂಸದ ಶ್ರೇಯಸ್‍ಪಟೇಲ್, ಡಿಸಿ ಸಿ.ಸತ್ಯಭಾಮ, ಎಸ್ಪಿ ಮಹಮದ್ ಸುಜೇತಾ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿಯವರ ಸಮಾಕ್ಷಮದಲ್ಲಿ ಮುಚ್ಚಲಾಯಿತು.
ಪ್ರತಿ ವರ್ಷದಂತೆ ವಿಶ್ವ ರೂಪ ದರ್ಶನದ ಬಳಿಕ ನೆರೆದಿದ್ದ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಇದಕ್ಕೂ ಮುನ್ನ ಬೆಳಿಗ್ಗೆ ಸಾರ್ವಜನಿಕ ದರ್ಶನ ಬೇಗ ಬಂದ್ ಮಾಡಿದ್ದರಿಂದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಮುಂದಿನ ವರ್ಷ 2025 ಅ.9 ರಿಂದ ಅ.23 ರವರೆಗೆ ಹಾಸನಾಂಬೆ ದರ್ಶನೋತ್ಸವ ನಿಗದಿಯಾಗಿದೆ.