ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹಾಸನಾಂಬೆ ದರ್ಶನಕ್ಕೆ (Hasanamba Darshana) ವಿಶೇಷ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಲಾಗಿದೆ.
ಅಕ್ಟೋಬರ್ 10 ರಿಂದ 22 ರ ವರೆಗೆ ಹಾಸನಾಂಬೆ ದರ್ಶನಕ್ಕೆ ವಿಶೇಷ ಪ್ರವಾಸ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲ್ಲ, ದಿನಕ್ಕೆ 10% ಸಮೀಕ್ಷೆ ಟಾರ್ಗೆಟ್: ಸಿಎಂ
ಬೆಂಗಳೂರಿನಿಂದ ನುಗ್ಗೆಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ, ನಾಗರ ನವಿಲೇ ನಾಗೇಶ್ವರ ಮತ್ತು ಹಾಸನಾಂಬೆ ದರ್ಶನ ಮುಗಿಸಿ ವಾಪಸ್ ಬರುವುದು. ಬೆಂಗಳೂರಿನಿಂದ ಹೊರಡುವ ಪ್ರವಾಸಿಗರಿಗೆ 2,016 ರೂಪಾಯಿ ನಿಗದಿ. ಮಾಡಲಾಗಿದೆ. ಇದರಲ್ಲಿ ಹಾಸನಾಂಬೆ ದರ್ಶನದ ಪಾಸ್ 1,000 ರೂಪಾಯಿ ಒಳಗೊಂಡಿದೆ.
ಮೈಸೂರಿನಿಂದಲೂ ಟೂರ್ ಪ್ಯಾಕೇಜ್ ಇದ್ದು, 1,250 ರೂಪಾಯಿ ನಿಗದಿ ಮಾಡಲಾಗಿದೆ. ಮೈಸೂರು, ಬೇಲೂರು ಹಾಗೂ ಹಳೇಬೀಡು ಮೂರು ಸ್ಥಳಗಳನ್ನು ಹೊಂದಿದೆ. ಇದನ್ನೂ ಓದಿ: ‘ಹಣದ ಆಸೆಗೆ ಬಲಿಯಾಗಿದ್ದೇನೆ, ದಯಾಮಾಡಿ ಬಚಾವ್ ಮಾಡಿ’ – ಸುಂದರ ಗೌಡರ ಕಾಲಿಗೆ ಬಿದ್ದು ಗೋಗರೆದಿದ್ದ ಚಿನ್ನಯ್ಯ