ಕಲಬುರಗಿ: ಹಾಸನ – ಸೋಲಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ (Hasan Solapur Train) ಬ್ರೇಕ್ ಬೈಡಿಂಗ್ ದೋಷದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ.
ಇಂದು (ಜು.21) ಮುಂಜಾನೆ ಶಹಬಾದ್ ತಾಲೂಕಿನ ಮರತೂರ ಬಳಿ ಈ ಘಟನೆ ನಡೆದಿದೆ. ಬ್ರೇಕ್ ಬೈಡಿಂಗ್ ತಾಂತ್ರಿಕ ದೋಷದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ, ಪಾಯಿಂಟ್ ಮ್ಯಾನ್ ಇದನ್ನು ಗಮನಿಸಿ ರೇಡ್ ಹ್ಯಾಂಡ್ ಸಿಗ್ನಲ್ ತೋರಿಸಿ ರೈಲು ನಿಲ್ಲಿಸಿದ್ದಾರೆ. ಬಳಿಕ ಪರಿಶೀಲಿಸಿ, ಕೋಚ್ ಸಂಖ್ಯೆ CR 227454 LS-5 ಎಂಜಿನ್ ನಿಂದ 4ನೇ ಕೋಚ್‌ನಲ್ಲಿ ಕಾಣಿಸಿಕೊಂಡಿದ್ದ ಬ್ರೇಕ್ ಬೈಂಡಿಂಗ್ ದೋಷ ಸರಿಪಡಿಸಲಾಗಿದೆ. ಇದನ್ನೂ ಓದಿ: ತಮಿಳುನಾಡು ಸಿಎಂ ಸ್ಟಾಲಿನ್ ಆಸ್ಪತ್ರೆಗೆ ದಾಖಲು
ಘಟನೆಯಿಂದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ಬ್ರೇಕ್ ಬೈಡಿಂಗ್ ದೋಷ ಸರಿಪಡಿಸಿದ ಬಳಿಕ ಪುನಃ ರೈಲು ಸಂಚರಿಸಿದೆ. ಇದನ್ನೂ ಓದಿ: ಮುಡಾ ಕೇಸ್ | ಸಿಎಂ ಪತ್ನಿ ವಿಚಾರಣೆ ರದ್ದು – ನಿಮ್ಮನ್ಯಾಕೆ ರಾಜಕೀಯಕ್ಕೆ ಬಳಕೆ ಮಾಡ್ತಾರೆ?: ಇ.ಡಿಗೆ ಸುಪ್ರೀಂ ಛೀಮಾರಿ