ವಿಕೆಟ್ ಪಡೆದ ಸಂಭ್ರಮದಲ್ಲಿ ಕತ್ತು ಉಳುಕಿಸಿಕೊಂಡ ಪಾಕ್ ಬೌಲರ್- ವಿಡಿಯೋ ನೋಡಿ

Public TV
1 Min Read
HASAN ALI

ಹರಾರೆ: ಜಿಂಬಾಬ್ವೆ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ವಿಕೆಟ್ ಕಿತ್ತು ಸಂಭ್ರಮಾಚರಣೆ ಪಡುವ ವೇಳೆ ಕತ್ತನ್ನು ಉಳಿಕಿಸಿಕೊಂಡಿದ್ದಾರೆ.

ಸೋಮವಾರ ಬುಲವಾಯೋ ಕ್ರಿಡಾಂಗಣದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಬೌಲರ್ ಹಸನ್ ಅಲಿ ಜಿಂಬಾಬ್ವೆ ತಂಡದ ರಯಾನ್ ಮುರ್ರೆ ವಿಕೆಟ್ ಕಿತ್ತು ಸಂಭ್ರಮಾಚರಣೆಯ ವೇಳೆ ಕುತ್ತಿಗೆಗೆ ತೀವ್ರವಾಗಿ ಗಾಯಮಾಡಿಕೊಂಡಿದ್ದಾರೆ.

https://twitter.com/Iamrahul28/status/1018892961281708032

24 ವರ್ಷದ ಹಸನ್ ಅಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಬೌಲಿಂಗ್ ಆಟಗಾರರಾಗಿದ್ದಾರೆ. ಬೌಲಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡುತ್ತಿರುವ ಹಸನ್ ಅಲಿ, ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪೂರ್ತಿ ಮರೆತು ವರ್ತಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಕೇವಲ ವಿಕೆಟ್ ಪಡೆದಿದ್ದಕ್ಕೆ ರೋಷಾವೇಷವಾಗಿ ವರ್ತಿಸಿದ್ದರ ಪರಿಣಾಮ ಕತ್ತನ್ನು ಉಳುಕಿಸಿಕೊಂಡಿದ್ದಾರೆ. ಉಳುಕಿಸಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಸನ್ ಅಲಿ ರವರು ಪಾಕಿಸ್ತಾನದ ಪ್ರಮುಖ ಬೌಲರ್ ಆಗಿದ್ದು, ಕಳೆದ ವರ್ಷ ನಡೆದ ಟಿ-20 ವಿಶ್ವಕಪ್ ಪಂದ್ಯಗಳಲ್ಲಿ 13 ವಿಕೆಟ್ ಪಡೆದುಕೊಂಡಿದ್ದಲ್ಲದೇ, ಭಾರತದ ವಿರುದ್ಧ ಫೈನಲ್ ಪಂದ್ಯದಲ್ಲಿ 3 ವಿಕೆಟ್ ಗಳನ್ನು ಕಿತ್ತು ಪಾಕಿಸ್ತಾನ ಗೆಲುವಿಗೆ ಪ್ರಮುಖಪಾತ್ರ ವಹಿಸಿದ್ದರು

Share This Article
Leave a Comment

Leave a Reply

Your email address will not be published. Required fields are marked *