ಮುಂಬೈ: ಬಾಲಿವುಡ್ ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಕೊನೆಗೂ ಮದುವೆಯಾದರು ಎಂದು ಬಿಟೌನ್ ನಿಟ್ಟುಸಿರಿಟ್ಟಿತ್ತು. ಅದರಲ್ಲೂ ದಬಂಗ್ ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿದ್ದ ಸೋನಾಕ್ಷಿ ಸಿನ್ಹಾ ಅವರೇ ಸಲ್ಮಾನ್ ಪತ್ನಿ ಎಂದು ಹಿರಿಹಿರಿ ಹಿಗ್ಗಿತ್ತು. ಈ ಖುಷಿ ಒಂದೇ ಠುಸ್ಸು ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಇವರಿಬ್ಬರ ಮದುವೆ ಫೋಟೋದ ಹಿಂದೆ ಹೊಸದೊಂದು ಕಹಾನಿಯೇ ಅಡಗಿದೆ.
ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಹಲವರ ಜೊತೆ ಡೇಟಿಂಗ್ ಮಾಡಿದ್ದರು ಎನ್ನುವುದು ಅವರ ಸಿನಿಮಾಗಳಷ್ಟೇ ಸತ್ಯ. ಆದರೆ ಯಾರೂ ಕೂಡ ಸಲ್ಲು ಜೊತೆ ಮದುವೆ ಆಗಲು ಮುಂದೆ ಬಂದಿರಲಿಲ್ಲ. ಈಗ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಮದುವೆ ಆಗಿದ್ದಾರೆ ಎಂಬ ಗಾಸಿಪ್ ಬಿಟೌನ್ ತುಂಬಾ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋವೊಂದು ಈ ಗಾಸಿಪ್‍ಗೆ ಕಾರಣವಾಗಿದೆ. ಸಲ್ಲು ಮತ್ತು ಸೋನಾಕ್ಷಿ ಸಿನ್ಹಾ ನವ ದಂಪತಿಯ ರೀತಿಯಲ್ಲಿ ಕಂಗೊಳಿಸುತ್ತಿದ್ದ ಆ ಫೋಟೋ ವೈರಲ್ ಕೂಡ ಆಗಿದೆ. ಆದರೆ, ಅದರ ಹಿಂದಿನ ಅಸಲಿಯತ್ತೇ ಬೇರೆ ಇದೆ. ಇದನ್ನೂ ಓದಿ : ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?
ಸಲ್ಲು ಮತ್ತು ಸೋನಾಕ್ಷಿ ಜೋಡಿಯ ಮಧ್ಯೆ ಒಂದೊಳ್ಳೆ ಭಾಂದವ್ಯ ಇರುವುದು ನಿಜ. ಆದರೆ ಮದುವೆ ಆಗಿದ್ದಾರೆ ಎಂಬುದೆಲ್ಲ ಒಂದು ಸುಳ್ಳು. ಗಾಸಿಪ್‍ಗೆ ಕಾರಣವಾಗಿರುವ ಈ ಫೋಟೋವನ್ನು ಎಡಿಟ್ ಮಾಡಲಾಗಿದ್ದು, ಬೇರೊಬ್ಬ ದಂಪತಿ ತೆಗೆಸಿಕೊಂಡಿದ್ದ ಮದುವೆ ಫೋಟೋ ಅದಾಗಿದೆ. ಅವರ ಮುಖಕ್ಕೆ ಸೋನಾಕ್ಷಿ ಹಾಗೂ ಸಲ್ಮಾನ್ ಅವರ ಮುಖವನ್ನು ಫಿಕ್ಸ್ ಮಾಡಲಾಗಿದೆ. ವೈರಲ್ ಆದ ಫೋಟೋ ನೋಡಿದ ಎಷ್ಟೋ ನೆಟ್ಟಗರು ಅದನ್ನು ನಿಜ ಎಂದು ನಂಬಿದ್ದರು. ಗುಟ್ಟು ರಟ್ಟಾದ ನಂತರ ಪೆಚ್ಚಾಗಿದ್ದಾರೆ. ಇದನ್ನೂ ಓದಿ : ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು
ಸೋನಾಕ್ಷಿ ಸಿನ್ಹಾ 2010ರಲ್ಲಿ ಸಲ್ಲು ಭಾಯ್ ಜೊತೆ ದಬಂಗ್ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ನಟಿಸಿದ ಮೊದಲ ಸಿನಿಮಾದಲ್ಲಿಯೇ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಈ ಗೆಲುವೇ ಸಲ್ಮಾನ್ ಜೊತೆ ಸೋನಾಕ್ಷಿ ಉತ್ತಮ ಒಡನಾಟ ಇಟ್ಟುಕೊಳ್ಳಲು ಸಾಧ್ಯವಾಯಿತು. ಸದ್ಯ ಕೆಲವು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿರುವ ಸೋನಾಕ್ಷಿ ಬ್ಯುಸಿ, ಸದ್ಯಕ್ಕಂತೂ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲವಂತೆ.