ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿಂದು (Renukaswamy Case) ಮತ್ತೆ ನ್ಯಾಯಾಲಯದ ಮುಂದೆ ನಟ ದರ್ಶನ್ ಸೇರಿ ಬಂಧಿತ 17 ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ನ್ಯಾಯಾಲಯ ಆರೋಪಿಯನ್ನು ಮತ್ತೆ ಪೊಲೀಸ್ ಕಸ್ಟಡಿಗೆ (Police Custody) ನೀಡಲಿದೆಯೇ ಅಥವಾ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Advertisement
ಕೋರ್ಟ್‌ಗೆ ದರ್ಶನ್‌ರನ್ನ (Darshan) ಹಾಜರು ಪಡಿಸುವುದಕ್ಕೂ ಮುನ್ನ ದರ್ಶನ್ ಪರ ವಕೀಲರಾದ ರಂಗನಾಥ್ ರೆಡ್ಡಿ ಹಾಗೂ ಅನಿಲ್ ಬಾಬು (Anil Babu) ಆರೋಪಿಯನ್ನ ಪೊಲೀಸ್ ಠಾಣೆಯಲ್ಲಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ತೈಲ ದರ ಏರಿಕೆ ಖಂಡಿಸಿ ಸೈಕಲ್ ಜಾಥಾ – ವಿಜಯೇಂದ್ರ, ಅಶ್ವಥ್ ನಾರಾಯಣ್ ಸೇರಿ ಬಿಜೆಪಿ ನಾಯಕರು ವಶಕ್ಕೆ
Advertisement
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲರು, ಪೊಲೀಸ್ ಕಸ್ಟಡಿ ಅವಧಿ ಇಂದಿಗೆ (ಗುರುವಾರ) ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯೊಳಗೆ ಕೋರ್ಟ್‌ಗೆ ಹಾಜರುಪಡಿಸಬೇಕಾಗುತ್ತದೆ. ಬಹುತೇಕ ಎಲ್ಲ ಆಯಾಮಗಳ ತನಿಖೆ ಮುಗಿದಿರಬಹುದು. ಆದ್ದರಿಂದ ಪೊಲೀಸರು ಮತ್ತೆ ಕಸ್ಟಡಿ ಕೇಳುವ ಸಾಧ್ಯತೆಗಳಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್!
Advertisement
Advertisement
ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಎಸ್‌ಪಿಪಿ ಅವರು ಮತ್ತೆ ರಿಮ್ಯಾಂಡ್ ಅರ್ಜಿ ಹಾಕ್ತಾರಾ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡ್ತಾರಾ ಎಂಬುದನ್ನು ಕಾದುನೋಡಬೇಕು. ದರ್ಶನ್ ಜೊತೆ ಮಾತಾಡಿದ್ದೇವೆ. ಅವರ ಆರೋಗ್ಯ ಚೆನ್ನಾಗಿದೆ. ಜಾಮೀನು ಅರ್ಜಿ ಹಾಕೋದಕ್ಕೆ ಇನ್ನೂ ಸಮಯ ಇದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಒಂದು ವಾರದಲ್ಲಿ ಬೇಲ್ ಅರ್ಜಿ ಸಲ್ಲಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ ಮಾತನಾಡಿ, ಕಸ್ಟಡಿಗೆ ಕೇಳೋದು ತನಿಖಾಧಿಕಾರಿಗಳ ನಿರ್ಧಾರ. ಆದರೆ ಬಹುತೇಕ ತನಿಖೆ ಮುಗಿದಿರಬಹುದು. ನಿನ್ನೆ ಆರೋಪಿಗಳಿಗೆ ಡಿಎನ್ಎ ಟೆಸ್ಟ್ ಮಾಡಿರುವುದಾಗಿ ಹೇಳಿದ್ದಾರೆ. ಡಿಎನ್‌ಎ ಟೆಸ್ಟ್‌ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಪಡೆಯಬೇಕು. ಸ್ಯಾಂಪಲ್ ಟೆಸ್ಟ್ ಮಾಡುವುದಕ್ಕೂ ಕೋರ್ಟ್ ಅನುಮತಿ ಬೇಕೇ ಬೇಕು. ಆದರೆ ಪೊಲೀಸರು ತಗೊಂಡಿದ್ದಾರಾ ಇಲ್ವಾ ಗೊತ್ತಿಲ್ಲ. ಡಿಎನ್ಎ ಟೆಸ್ಟ್ ಮಾಡಿದ್ರಾ ಇಲ್ವೊ ಅನ್ನೋದು ನಮಗೆ ಗೊತ್ತಿಲ್ಲ. ಅವರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ನಮಗೆ ಮಾಹಿತಿ ತಿಳಿಯುತ್ತದೆ ಎಂದು ವಿವರಿಸಿದ್ದಾರೆ.