ಬೆಳಗಾವಿ: ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭೇಟಿ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಪ್ರತಿಕ್ರಿಯೆ ನೀಡಿದ್ದು, ಎಲೆಕ್ಷನ್ ಟೈಮ್‌ನಲ್ಲಿ ಬರ್ತಾರೆ, ಎಲೆಕ್ಷನ್ ನಂತರ ಹೋಗ್ತಾರೆ. ಈ ಮಧ್ಯೆ ಏನಾದರೂ ನ್ಯಾಯ ಒದಗಿಸಿಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಮೀಸಲಾತಿ ಹೆಸರು ಹೇಳಿ ಗೊಂದಲ ನಿರ್ಮಾಣ ಮಾಡಿದ್ದಾರೆ. ಕಾನೂನಿನಲ್ಲಿ ಈ ರೀತಿ ಮಾಡಲು ಅವಕಾಶ ಎಲ್ಲಿದೆ? ಸಮಾಜದವರು ಯಾರ‍್ಯಾರು ಏನೇನು ಮೀಸಲಾತಿ ಕೇಳ್ತಾರೆ ಅವರಿಗೆ ಕೊಡಬೇಕು. ಅವರು ಪರ್ಸೆಂಟೇಜ್ ಕೊಡಬೇಕು. ಎಲ್ಲಾ ಕೋರ್ಟ್‌ಗೆ ಹೋಗಿ ಲಿಟಿಗೇಷನ್ ಹಾಕಬೇಕು. ಪೆಂಡಿಂಗ್ ಇರಲಿ ಅಂತ ಹೇಳಿ ಜನರ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ರಾಜ್ಯದ ಸಿಎಂ ನೇರವಾಗಿ ಬಂದು ಮಾತನಾಡಬೇಕಿತ್ತು. ಕ್ಯಾಬಿನೆಟ್ ಬಳಿಕ ಎಷ್ಟು ಪರ್ಸೆಂಟೇಜ್ ನೀಡಿದ್ದೇವೆಂದು ತಿಳಿಸಬೇಕಿತ್ತು. ಒಕ್ಕಲಿಗರು 12 ಪರ್ಸೆಂಟ್ ಮೀಸಲಾತಿ ಕೇಳುತ್ತಿದ್ದಾರೆ. ಪಂಚಮಸಾಲಿಗಳು ಕೇಳ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮನ್ಮುಲ್‌ನಲ್ಲಿ ಮೆಗಾ ಡೈರಿ ಉದ್ಘಾಟಿಸಿದ ಗೃಹ ಸಚಿವ ಅಮಿತ್ ಶಾ
Advertisement
Advertisement
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಕೊಟ್ಟು ಶೆಡ್ಯೂಲ್ 9ನಲ್ಲಿ ಸೇರಿಸಿದ್ದೇವೆ. ಸಂವಿಧಾನ ತಿದ್ದುಪಡಿ ತಂದಿದ್ದೇವೆ ಎಂದು ಧೈರ್ಯವಾಗಿ ಹೇಳಬೇಕಿತ್ತಲ್ಲ. ಅವರಿಗೆ ಏನೂ ಹೇಳಕ್ಕಾಗದೇ ಎಲ್ಲವನ್ನೂ ಗೊಂದಲದಲ್ಲಿ ಇಟ್ಟಿದ್ದಾರೆ. ಈಗ ಯಾವುದೇ ಒಬ್ಬರು ಸ್ವಾಮೀಜಿ, ಸಮಾಜದ ಮುಖಂಡರಿಗೆ ನಮಗೆ ನ್ಯಾಯ ಸಿಕ್ಕಿದೆ ಅಂತಾ ಹೇಳಲು ಅವರ ಪಕ್ಷದವರಿಗೆ ಧೈರ್ಯ ಇಲ್ಲ. ಮುಖ್ಯಮಂತ್ರಿಗಳಿಗೆ ಧೈರ್ಯ ಇಲ್ಲ, ಅವರೇ ಆಚೆ ಬಂದು ಹೇಳಲಾಗುತ್ತಿಲ್ಲ. ಈ ತೀರ್ಮಾನದಿಂದ ಎಲ್ಲ ಸಮಾಜಕ್ಕೂ ಅನ್ಯಾಯ ಮಾಡ್ತಿದ್ದಾರೆ. ಲಿಟಿಗೇಶನ್ ಮಾಡಲು ಏನು ಬೇಕು ಅದನ್ನ ಮಾಡುತ್ತಿದ್ದಾರೆ. ನ್ಯಾಯಬದ್ಧ, ಸಂವಿಧಾನಬದ್ಧ ನ್ಯಾಯ ಒದಗಿಸಲು ಈ ಸರ್ಕಾರ ಇಲ್ಲ. ಇಂದು ಸಂಜೆ ನಾನು, ನಮ್ಮ ವರಿಷ್ಠರು, ವಿಪಕ್ಷ ನಾಯಕರು, ಶಾಸಕರು ಸೇರಿ ಚರ್ಚೆ ಮಾಡುತ್ತೇವೆ. ವಿಜಯಪುರದಲ್ಲಿ ಕೃಷ್ಣಾ ನದಿ ಹೋರಾಟ ಸಭೆ ಬಳಿಕ ಚರ್ಚೆ ಮಾಡುತ್ತೇವೆ. ಬಳಿಕ ಕಾಂಗ್ರೆಸ್‌ನ ಸಂಪೂರ್ಣ ಅಭಿಪ್ರಾಯ ಹೇಳ್ತೇವೆ ಎಂದಿದ್ದಾರೆ.
Advertisement
Advertisement
ಮೀಸಲಾತಿ ಘೋಷಣೆ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ವಪಕ್ಷ ಸಭೆ ಕರೆಯದೇ ಇರೋದೆ ಒಳ್ಳೆಯದಾಯಿತು. ಅವರಿಗೆ ಯಾರ ಬಗ್ಗೆಯೂ ನಂಬಿಕೆ ಇಲ್ಲ. ಅಲ್ಲಿ ಹೋಗಿ ಅವರು ಹೇಳಿದ ಹಾಗೇ ಕೇಳಿ ಬರೋದು ತಪ್ಪಿತು. ಅವನ್ನೆಲ್ಲ ಜನ ಒಪ್ಪಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಪರೇಷನ್ ಓಲ್ಡ್ ಮೈಸೂರು ಸುಳಿವು ನೀಡಿದ ಶಾ- ಜಾತಿ ಸಮೀಕರಣದ ಫಸ್ಟ್ ರಿಪೋರ್ಟ್ ಪಡೆದ ಚಾಣಕ್ಯ