ಹರಿಯಾಣ್ವಿ ಗಾಯಕಿಯೊಬ್ಬರು ಎರಡು ವಾರಗಳ ನಂತರ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಶೂಟಿಂಗ್ ನೆಪದಲ್ಲಿ ಗಾಯಕಿಯನ್ನ ಕರೆದೊಯ್ದ ಇಬ್ಬರು, ಇದೀಗ 12 ದಿನಗಳ ನಂತರ ಮೃತದೇಹ ಪತ್ತೆಯಾಗಿದೆ.
Advertisement
ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕೆಂದು ತೆರಳಿದ್ದ ಗಾಯಕಿ ಸಂಗೀತಾ ಅನುಮಾನಸ್ಪದವಾಗಿ ಹರಿಯಾಣದ ರೋಹ್ಟಕ್ ಜಿಲ್ಲೆಯ ಪ್ಲೇ ಓವರ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಇದೀಗ ಗಾಯಕಿಯ ಶವ ರೋಹ್ಟಕ್ ಜಿಲ್ಲೆಯ ಹೆದ್ದಾರಿಯೊಂದರ ಬಳಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶೂಟಿಂಗ್‌ಗೆ ಎಂದು ಕರೆದೊಯ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕೃಷಿಯತ್ತ ಮುಖ ಮಾಡಿದ ಹಿರಿಯ ನಟಿ ಶ್ರುತಿ
Advertisement
Advertisement
ಸಾವಿಗೀಡಾಗಿರುವ ಹರಿಯಾಣ್ವಿ ಸಂಗೀತಾ ಗಾಯಕಿ ಎಂದು ಗುರುತಿಸಲಾಗಿದೆ. ಹರಿಯಾಣ್ವಿ ಗಾಯಕಿ ಸಂಗೀತಾ ದೆಹಲಿಯಲ್ಲಿ ವಾಸ ಮಾಡುತ್ತಿದ್ದರು. ಮೇ 11 ರಂದು ಸಂಗೀತಾ ಫ್ಯಾಮಿಲಿ ಜೊತೆಗೆ ಕೊನೆಯದಾಗಿ ಕಾಣಿಸಿಕೊಂಡಿದ್ದರು. 2 ವಾರ ಕಳೆದರು ಸಿಗದ ಮಗಳಿಗಾಗಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ. ಸಂಗೀತಾ ಜೊತೆಗೆ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದರು. ತನಿಖೆ ನಂತರ ಕೊಲೆ ಮಾಡಿರುವುದಾಗಿ ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದಾರೆ.