ನವದೆಹಲಿ: 2017 ವರ್ಷದ ಯುಪಿಎಸ್‍ಸಿ ಪರೀಕ್ಷೆಗಳ ಫಲಿತಾಂಶ ಹೊರಬಿದಿದ್ದು, ಈ ಬಾರಿಯ ಪರೀಕ್ಷೆಯಲ್ಲಿ ಹಲವು ಆಸಕ್ತಿದಾಯಕ ಅಭ್ಯರ್ಥಿಗಳು ರ್‍ಯಾಂಕ್ ಪಡೆದಿದ್ದಾರೆ.
ಅಂದಹಾಗೇ ಹರಿಯಾಣದ ಮೂಲದ ಅನು ಕುಮಾರಿ (31) ಎಂಬವರು 2ನೇ ರ್‍ಯಾಂಕ್ ಪಡೆದಿದ್ದು, ಈ ಬಾರಿಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ವಿಶೇಷವೆಂದರೆ ಅನು ಕುಮಾರಿ ಅವರಿಗೆ ನಾಲ್ಕು ವರ್ಷದ ಮಗುವೊಂದಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತಾಯಿಯಾಗಿ ಜವಾಬ್ದಾರಿಗಳನ್ನು ನಿರ್ವಹಿಸುವುದರೊಂದಿಗೆ ಪ್ರತಿದಿನ ಸತತವಾಗಿ 11 ರಿಂದ 12 ಗಂಟೆಗಳ ಕಾಲ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ. ಅಲ್ಲದೇ ತಾನು ವಾಸಿಸುವ ಹಳ್ಳಿಯಲ್ಲಿ ದಿನಪತ್ರಿಕೆ ಸಹ ಲಭಿಸುವುದಿಲ್ಲ. ಅದ್ದರಿಂದ ಮಾಹಿತಿಗಾಗಿ ಆನ್ ಲೈನ್ ಸಹಾಯ ಪಡೆಯುತ್ತಿದ್ದೆ ಎಂದು ಹೇಳಿದ್ದಾರೆ.
Advertisement
ಜೀವನದಲ್ಲಿ ಯಾವುದೇ ಗುರಿ ಸಾಧಿಸಲು ನಾವು ಶಕ್ತಿಯುತರಾಗಿರ ಬೇಕಾಗುತ್ತದೆ. ಇದನ್ನು ನಾವು ಮಾಡಿದರೆ ನಮ್ಮ ಗುರಿಯನ್ನು ಯಾರು ತಡೆಯಲು ಸಾಧ್ಯವಿಲ್ಲ. ಅಲ್ಲದೇ ಗುರಿಯನ್ನು ಸುಲಭವಾಗಿ ತಲುಪಬಹುದು ಎಂದು ಹೇಳಿದ್ದಾರೆ.
Advertisement
ಅನು ಕುಮಾರಿ ಅವರು ದೆಹಲಿ ವಿವಿ ಹಿಂದೂ ಕಾಲೇಜಿನಲ್ಲಿ ಭೌತ ಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಅಲ್ಲದೇ ನಾಗಪುರ ಐಎಂಟಿ ಯಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಸೇವೆಗೆ ಸೇರಿದ ಬಳಿಕ ಮಹಿಳೆಯರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.