ಚಂಡೀಗಢ: ಪತಿಯನ್ನು ಕೊಂದಿದ್ದ ಮಹಿಳೆಗೆ ಹಾಗೂ ಆಕೆಯ ಪ್ರಿಯಕರನಿಗೆ ಶುಕ್ರವಾರ ನುಹ್ (Nuh) ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ (Life imprisonment) ಪ್ರಕಟಿಸಿದೆ.
ಸೋಹ್ನಾ ನಿವಾಸಿ ಗೀತಾ ಹಾಗೂ ದೆಹಲಿಯ (Delhi) ಚತ್ತರ್ಪುರ (Chattarpur) ನಿವಾಸಿ ಸುರ್ಜಿತ್ ಚೌಹಾನ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು. 2017ರಲ್ಲಿ ವಿಪಿನ್ ತೋಮರ್ ಅವರನ್ನು ಕೊಲೆ ಮಾಡಲಾಗಿತ್ತು. ಮೃತ ದೇಹವನ್ನು ಶಿಕ್ರಾವಾ (Shikrawa) ರಸ್ತೆಯ ಬಳಿ ಎಸೆದು ಹೋಗಿದ್ದರು.
Advertisement
Advertisement
ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಪಿನ್ ತೋಮರ್ ಮೃತದೇಹದ ಬಗ್ಗೆ ಸ್ಥಳೀಯ ನಿವಾಸಿ ಓಂ ಪ್ರಕಾಶ್ ಎಂಬವರು ನಾಗಿನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಅಡಿ ತಪ್ಪಿತಸ್ಥರ ವಿರುದ್ಧ ಸೆಕ್ಷನ್ 302 (ಕೊಲೆ) ಹಾಗೂ 201ರ (ಸಾಕ್ಷ್ಯ ನಾಶ) ಅಡಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ದೇವಸ್ಥಾನದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2.50 ಸಾವಿರ ಹಣ ಸೀಜ್
Advertisement
Advertisement
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಕುಮಾರ್ ದುಗ್ಗಲ್ (Sandeep Kumar Duggal) ಅವರು ಕೊಲೆಗಾರರನ್ನು ಬುಧವಾರ ಅಪರಾಧಿಗಳು ಎಂದು ಘೋಷಿಸಿ, ಶುಕ್ರವಾರ ಶಿಕ್ಷೆ ಪ್ರಕಟ ಮಾಡಿದ್ದಾರೆ. ಇದನ್ನೂ ಓದಿ: ಮಾಡಾಳ್ನ ಮೈಂಟೇನ್ ಮಾಡೋದೇ ‘ಲೋಕಾ’ಗೆ ಸವಾಲು- ರಾತ್ರಿಪೂರ್ತಿ ಕಣ್ಣೀರಿಡ್ತಿರೋ ಭ್ರಷ್ಟ ಮಾಡಾಳ್