ಶ್ರೀನಗರ: ದೆಹಲಿ ಕಾರು ಸ್ಫೋಟ (Delhi Blast) ಪ್ರಕರಣಕ್ಕೆ ಸಂಬಂಧಿಸಿದಂತೆ ʻವೈಟ್-ಕಾಲರ್ʼ ಉಗ್ರರ ಘಟಕದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ದಕ್ಷಿಣ ಕಾಶ್ಮೀರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯೆಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹರಿಯಾಣದ (Haryana) ರೋಹ್ಟಕ್ ಮೂಲದ ಡಾ.ಪ್ರಿಯಾಂಕಾ ಶರ್ಮಾ (Dr Priyanka Sharma) ಎಂದು ಗುರುತಿಸಲಾಗಿದೆ. ಆಕೆ ಜಮ್ಮು ಮತ್ತು ಕಾಶ್ಮೀರದಿಂದ ನವದೆಹಲಿಗೆ ಸಂಪರ್ಕ ಹೊಂದಿರುವ ʻವೈಟ್-ಕಾಲರ್ʼ ಭಯೋತ್ಪಾದನಾ ಘಟಕದ ಜೊತೆ ಸಂಪರ್ಕದಲ್ಲಿದ್ದಾಳೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆಗಾಗಿ ಆಕೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: Delhi Blast | 8 ಮೃತದೇಹಗಳ ಗುರುತು ಪತ್ತೆ – 2 ಶವಗಳು ಉಗ್ರರದ್ದು ಅನ್ನೋ ಶಂಕೆ; ಒಂದು ಶವದ ತಲೆ ಮಿಸ್ಸಿಂಗ್!
ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸರ ಗುಪ್ತಚರ ತಂಡ ಅನಂತ್‌ನಾಗ್‌ನ ಮಲಕ್‌ನಾಗ್ ಪ್ರದೇಶದಲ್ಲಿ ಬಾಡಿಗೆ ವಸತಿಗೃಹದ ಮೇಲೆ ದಾಳಿ ನಡೆಸಿ ಆಕೆಯನ್ನು ಬಂಧಿಸಿದ್ದಾರೆ. ಆಕೆಯ ಮನೆಯಲ್ಲಿ ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್‌ಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಜಿಎಂಸಿ ಅನಂತ್‌ನಾಗ್‌ನ ಮಾಜಿ ಸಿಬ್ಬಂದಿಯಾಗಿದ್ದ ಅದೀಲ್ ಬಂಧನದ ನಂತರ ಆಕೆಯ ಹೆಸರು ಬೆಳಕಿಗೆ ಬಂದಿದೆ. ಭಯೋತ್ಪಾದಕ ಘಟಕಕ್ಕೆ ಆರ್ಥಿಕ ನೆರವಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾಗ ಪ್ರಿಯಾಂಕ ಶರ್ಮಾ ಹೆಸರು ಕೇಳಿಬಂದಿತ್ತು. ಬಳಿಕ ಪೊಲೀಸರು ಆಕೆಯ ವಿಳಾಸ ಪತ್ತೆ ಹಚ್ಚಿದ್ದರು. ಹೆಚ್ಚಿನ ಪರಿಶೀಲನೆಗಾಗಿ ಹರಿಯಾಣದ ತಂಡವೊಂದು ಅನಂತ್‌ನಾಗ್‌ಗೆ ತೆರಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ.10ರಂದು 13 ಜನರನ್ನು ಬಲಿತೆಗೆದುಕೊಂಡ ಕೆಂಪು ಕೋಟೆ ಸ್ಫೋಟದ ಬಗ್ಗೆ ದೆಹಲಿ ಪೊಲೀಸರು ಮತ್ತು ಕೇಂದ್ರ ಸಂಸ್ಥೆಗಳು ತನಿಖೆ ತೀವ್ರಗೊಳಿಸಿವೆ. ಇದನ್ನೂ ಓದಿ: ಉಮರ್ 2 ತಿಂಗಳ ಹಿಂದೆ ಮನೆಗೆ ಬಂದಿದ್ದ – ದೆಹಲಿ ಸ್ಫೋಟದಿಂದ ನಮಗೂ ಆಘಾತವಾಗಿದೆ ಎಂದ ಅತ್ತಿಗೆ

