ಚಂಡೀಗಢ: ಈ ಬಾರಿ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕ್‍ಟಾಕ್ ಸ್ಟಾರ್ ಸೋನಾಲಿ ಫೋಗಟ್ ಸೋಲು ಕಂಡಿದ್ದಾರೆ.
ಕಾಂಗ್ರೆಸ್ ನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋನಾಲಿ ಫೋಗಟ್ ಸೋಲು ಅನುಭವಿಸಿದ್ದಾರೆ. ಆದಂಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, 11 ಬಾರಿ ಬಿಶ್ನೋಯಿ ಕುಟುಂಬದ ಸದಸ್ಯರೇ ಸತತವಾಗಿ ಗೆಲುವಿನ ವಿಜಯಮಾಲೆ ಧರಿಸುತ್ತಾ ಬಂದಿದ್ದಾರೆ.
Advertisement
ಕುಲದೀಪ್ ಬಿಶ್ನೋಯಿ 55,554 (ಶೇ.52.34) ಮತಗಳನ್ನು ಪಡೆದುಕೊಂಡಿದ್ದಾರೆ. ಸೋನಾಲಿ ಫೋಗಟ್ 28,888 (ಶೇ.27.22) ಮತಗಳನ್ನು ಪಡೆದುಕೊಂಡಿದ್ದಾರೆ.
Advertisement
Advertisement
ಹರ್ಯಾಣದ ಹಿಸಾರ್ ಜಿಲ್ಲೆಯ ಸಂತ ನಗರದ ನಿವಾಸಿ ಸೋನಾಲಿ ಫೋಗಟ್ (40) ತಮ್ಮ ಟಿಕ್ ಟಾಕ್ ವಿಡಿಯೋಗಳ ಮೂಲಕ ಚರ್ಚೆಯಲ್ಲಿದ್ದರು. ಹರ್ಯಾಣದ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಸೋನಾಲಿ ಫೋಗಾಟ್ ಆದಂಪುರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಹರಿಯಾಣ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯೆಯಾಗಿದ್ದರಿಂದ ಸೋನಾಲಿ ಫೋಗಟ್ ಟಿಕೆಟ್ ಪಡೆದು ಚುನಾವಣೆ ಕಣಕ್ಕೆ ಇಳಿದಿದ್ದರು.
Advertisement
ಹರ್ಯಾಣದ ಮಾಜಿ ಮುಖ್ಯಮಂತ್ರಿ ಚೌಧರಿ ಭಜನ್ ಲಾಲ್ ಪುತ್ರ ಕುಲದೀಪ್ ಬಿಶ್ನೋಯಿ ಕ್ಷೇತ್ರ ಉಳಿಸಿಕೊಳ್ಳಲು ಭಾರೀ ಪ್ರಚಾರ ನಡೆಸಿದ್ದರು. ಹರ್ಯಾಣ 12 ವಿಧಾನಸಭಾ ಚುನಾವಣೆಯಲ್ಲಿ 11 ಬಾರಿ ಆದಂಪುರ ಕ್ಷೇತ್ರದಲ್ಲಿ ಬಿಶ್ನೋಯಿ ಕುಟುಂಬಸ್ಥರೇ ಗೆಲ್ಲುತ್ತಾ ಬಂದಿದ್ದಾರೆ. ಜಾಟ್ ಸಮುದಾಯದ ಕುಲದೀಪ್ ಮೂರು ಬಾರಿ ಶಾಸಕರಾಗಿ ಮತ್ತು ಒಂದು ಸಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹರ್ಯಾಣ ಕಾಂಗ್ರೆಸ್‍ನ ಜಾಟ್ ಸಮುದಾಯದ ನಾಯಕರಾಗಿಯೂ ಕುಲದೀಪ್ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಹರ್ಯಾಣದ ಹೆಚ್ಚು ಜಾಟ್ ಸಮುದಾಯದ ಜನರು ವಾಸಿಸುವ ಕ್ಷೇತ್ರಗಳಲ್ಲಿ ಕುಲ್‍ದೀಪ್ ಕೈ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದರು.
ಜನ್‍ನಾಯಕ್ ಜನತಾ ಪಾರ್ಟಿಯ ರಮೇಶ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ಆದಂಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.