Connect with us

Latest

ಪ್ರಧಾನಿ ಮೊರೆ ಹೋದ ಗ್ಯಾಂಗ್‍ರೇಪ್ ಅಪ್ರಾಪ್ತೆ

Published

on

Share this

ಸೋನಿಪತ್: ಶಾಲಾ ಬಾಲಕಿಯೊಬ್ಬಳು ತನ್ನ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯವನ್ನು ವಿವರಿಸಿ, ತನ್ನನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾಳೆ.

ನನ್ನ ಮೇಲೆ ಇಬ್ಬರು ಶಾಲಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಅತ್ಯಾಚಾರ ಮಾಡುವ ಮೊದಲು ಬಲವಂತವಾಗಿ ಬ್ಲೂ ಫಿಲ್ಮ್ ತೋರಿಸಿರುವುದಾಗಿ ಅಪ್ರಾಪ್ತೆ ಪತ್ರದಲ್ಲಿ ತಿಳಿಸಿದ್ದಾಳೆ.

ಅತ್ಯಾಚಾರಿಗಳನ್ನು ಕರಾಂಬೀರ್ ಮತ್ತು ಸುಖ್ಬೀರ್ ಎಂದು ಗುರುತಿಸಲಾಗಿದ್ದು. ಇವರು ಶಾಲೆಯ ಭೋದನೇತರ ಸಿಬ್ಬಂದಿ ಎಂದು ತಿಳಿದುಬಂದಿದೆ ಎಂದು ಹರಿಯಾಣದ ಪೊಲೀಸ್ ಅಧಿಕಾರಿ ಮುಖೇಶ್ ಜಾಖಡ್ ತಿಳಿಸಿದ್ದಾರೆ.

ಬಾಲಕಿಯು ಮೋದಿಯವರಿಗೆ ಇ-ಮೇಲ್ ಮಾಡುವ ಮೂಲಕ ತನ್ನ ಮೇಲೆ ಅತ್ಯಾಚಾರ ಮಾಡಿದವರ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಮೇಲ್ ಆಧಾರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ಮುಖೇಶ್ ಹೇಳಿದರು. ಅಲ್ಲದೆ ಶಾಲೆಯ ಇತರೆ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರ ಎಂದು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದರು.

ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಪೋಷಕರು ಶಾಲೆಗೆ ಈ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ ಹಾಗೂ ದೂರನ್ನು ದಾಖಲಿಸಿಲ್ಲ. ನಾವು ದೂರನ್ನು ನೀಡಲು ತಿಳಿಸಿದ್ದೇವೆ ಎಂದರು.

ಶಾಲೆಯ ಆಡಳಿತ ಮಂಡಳಿ ಈ ಪ್ರಕರಣವನ್ನು ನಿರಾಕರಿಸಿದೆ. ಮೂಲಗಳ ಪ್ರಕಾರ, ಬಾಲಕಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಅವರಿಗೂ ಇ-ಮೇಲ್ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *

Advertisement