ಡೆಹ್ರಾಡೂನ್: ಅತ್ಯಂತ ಭೀಕರ ರಸ್ತೆ ಅಪಘಾತದಲ್ಲಿ (Road Accident) ಟೀಂ ಇಂಡಿಯಾ (Team India) ಸ್ಟಾರ್ ಆಟಗಾರ ರಿಷಭ್ ಪಂತ್ (Rishabh Pant) ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಪಂತ್ ಅವರ ರಕ್ಷಣೆಗೆ ಧಾವಿಸಿದ ಬಸ್ ಡ್ರೈವರ್ (Bus Driver) ಆ ಕ್ಷಣದ ರೋಚಕತೆಯನ್ನು ವಿವರಿಸಿದ್ದಾರೆ.
Haryana | Bus driver Sushil Kumar & conductor Paramjeet spotted an uncontrolled car ram over the divider near Gurukul Narsan. They ran towards car to help the passenger. We have honoured them, state govt will too honour them for the work of humanity: Panipat Bus Depot GM K Jangra pic.twitter.com/J3pE410n8A
— ANI (@ANI) December 31, 2022
Advertisement
ಗಂಭೀರವಾಗಿ ಗಾಯಗೊಂಡಿದ್ದ ಪಂತ್ ಅವರನ್ನು ಘಟನಾ ಸ್ಥಳದಲ್ಲಿದ್ದವರು ರಕ್ಷಿಸಿದ್ದಾರೆ. ಅದರಲ್ಲೂ ಪಂತ್‌ಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬಸ್‌ನ ಡ್ರೈವರ್ ಸುಶೀಲ್ ಕುಮಾರ್ ( ಸಹಾಯಕ್ಕೆ ಮೊದಲಿಗರಾಗಿ ಧಾವಿಸಿದ್ದಾರೆ ಎಂಬುದು ಗೊತ್ತಾಗಿದೆ. ಬಳಿಕ ರಕ್ಷಣೆಗೆ ಧಾವಿಸಿದ ಬಸ್ ಡ್ರೈವರ್ ಸುಶೀಲ್ ಕುಮಾರ್ (Sushil Kumar) ಹಾಗೂ ಕಂಡಕ್ಟರ್ ಪರಮ್ ಜೀತ್‌ನನ್ನು (Paramjit) ಹರಿಯಾಣ ಸಾರಿಗೆ ಇಲಾಖೆ ಉನ್ನತಾಧಿಕಾರಿಗಳು ಅಭಿನಂದಿಸಿದ್ದಾರೆ. ಸ್ಮರಣಿಕೆ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ
Advertisement
As we dragged him (Rishabh Pant) out, the car caught fire & burned down within 5-7 secs. He had major injuries on his back. We enquired about his personal information & that is when he said he is an Indian team cricketer: Bus staff Paramjeet who rescued Cricketer Rishabh Pant pic.twitter.com/FQRrk1krVB
— ANI (@ANI) December 31, 2022
Advertisement
ಅಪಘಾತಕ್ಕೀಡಾಗಿದ್ದ ವ್ಯಕ್ತಿ ಯಾರೆಂದು ತಿಳಿಯುವ ಮೊದಲೇ ಸಹಾಯಕ್ಕೆ ಧಾವಿಸಿದ್ದ ಸುಶೀಲ್ ಕುಮಾರ್ ಹೇಳಿರುವ ಪ್ರಕಾರ, ರಿಷಭ್ ಅವರ ಕಾರಲ್ಲಿದ್ದ ವಸ್ತುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಸುಶೀಲ್ ಕುಮಾರ್ ಅವೆಲ್ಲವನ್ನೂ ಸಂಗ್ರಹಿಸಿ ಪಂತ್‌ಗೆ ಹಿಂದಿರುಗಿಸಿದ್ದಾಗಿ ಹೇಳಿದ್ದಾರೆ. ಇದನ್ನೂ ಓದಿ: ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ
Advertisement
ಪ್ರಾಥಮಿಕ ವರದಿಯ ಪ್ರಕಾರ, ಸ್ಥಳೀಯರು ಪಂತ್ ಅವರ ಸಾಮಗ್ರಿಗಳನ್ನು ಲೂಟಿ ಮಾಡಿದ್ದರು ಎಂಬುದು ವಾಸ್ತವಕ್ಕೆ ದೂರದ ಸಂಗತಿಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಆದರೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಅಧಿಕಾರಿಗಳು ಕೂಡ, ಯಾರೊಬ್ಬರೂ ಏನನ್ನೂ ಲೂಟಿ ಮಾಡಿಲ್ಲ ಎಂಬ ಸಂಗತಿಯನ್ನು ಖಾತ್ರಿ ಪಡಿಸಿದ್ದಾರೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ
ಮೈ ಜುಮ್ಮೆನ್ನಿಸುವಂತಿತ್ತು ಆ ರೋಚಕ ಕ್ಷಣ?: ರಿಷಭ್ ಪಂತ್ ಅವರನ್ನು ನೋಡಿದಾಗ ಮುಖವೆಲ್ಲಾ ರಕ್ತದ ಮಡುವಿನಲ್ಲಿತ್ತು. ಬಟ್ಟೆ ಚಿಂದಿಯಾಗಿ ಅವರ ಬೆನ್ನೆಲ್ಲಾ ತರಚಿದ ಗಾಯಗಳಾಗಿತ್ತು. ಅತೀವ ನೋವಿನಿಂದ ಬಳಲಿದ್ದ ಅವರು ಕುಂಟುತ್ತಿದ್ದರು, ಎಂದು ಸುಶೀಲ್ ಕುಮಾರ್ ಸಂದರ್ಶನದಲ್ಲಿ ಘಟನೆಯ ವಿವರಗಳನ್ನು ತೆರೆದಿಟ್ಟಿದ್ದಾರೆ. ನಾವು ಸಹಾಯಕ್ಕಾಗಿ ಕೂಗಿದರೂ ಯಾರೊಬ್ಬರೂ ಬರಲಿಲ್ಲ. ರಾಷ್ಟ್ರೀಯ ಹೈದಾರಿ ಸಹಾಯವಾಣಿಗೆ ಕರೆ ಮಾಡಿದೆವು. ಯಾವ ಅಧಿಕಾರಿಗಳಿಂದಲೂ ಸ್ಪಂದನೆ ಸಿಗಲಿಲ್ಲ. ಬಳಿಕ ನಾನು ಪೊಲೀಸ್‌ಗೆ ಮಾಹಿತಿ ನೀಡಿದೆ. ಬಸ್ ಕಂಡಕ್ಟರ್ ಅಂಬುಲೆನ್ಸ್ಗೆ ಕರೆ ಮಾಡಿದರು. ಅವರ ಸ್ಥಿತಿ ಬಗ್ಗೆ ನಾವು ಕೇಳುತ್ತಲೇ ಇದ್ದೆವು. ನೀರು ಕೂಡ ಕೊಟ್ಟೆವು. ಕೊಂಚ ಸುಧಾರಿಸಿದ ಬಳಿಕ ಅವರೇ `ನಾನು ರಿಷಭ್ ಪಂತ್’ ಎಂದು ಹೇಳಿಕೊಂಡರು ಎಂದು ಆ ಕ್ಷಣದ ರೋಚಕತೆಯನ್ನು ವಿವರಿಸಿದ್ದಾರೆ.
ನಾವು ರಕ್ಷಣೆಗೆ ಧಾವಿಸಿದಾಗ ರಿಷಭ್ ಪಂತ್ ನಮಗೆ ಅವರ ತಾಯಿಯ ನಂಬರ್ ಕೊಟ್ಟರು. ಆ ಸಂಖ್ಯೆಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಬಂದಿತು. 15 ನಿಮಿಷಗಳ ನಂತರ ಅಂಬುಲೆನ್ಸ್ ಬಂದಿತ್ತು. ರಸ್ತೆಯಲ್ಲಿ ಬಿದ್ದಿದ್ದ ಅವರ ಹಣವನ್ನು ಒಗ್ಗೂಡಿಸಿಕೊಟ್ಟೆವು. ಕಾರಿನಲ್ಲಿ ಬೇರೆ ಯಾರಾದ್ರೂ ಇದ್ದಾರೆಯೇ ಎಂದೆಲ್ಲಾ ವಿಚಾರಿಸಿದೆವು. ಕಾರಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಅವರು ತಿಳಿಸಿದರು.