ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶವೂ (Haryana Election Result) ಇಂದೇ (ಅಕ್ಟೋಬರ್ 8) ಪ್ರಕಟವಾಗಲಿದ್ದು, ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದ್ದು, ಅಧಿಕಾರದ ಗದ್ದುಗೆ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
2019ರ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದ 90 ಸ್ಥಾನಗಳಲ್ಲಿ ಬಿಜೆಪಿ 40, ಕಾಂಗ್ರೆಸ್ (Congress) 31 ಮತ್ತು ಜನನಾಯಕ ಜನತಾ ಪಕ್ಷ (BJP) 10 ಸ್ಥಾನಗಳನ್ನು ಗೆದ್ದಿದ್ದವು. ಜೆಜೆಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿತ್ತು. ದುಶ್ಯಂತ್ ಚೌಟಾಲಾ ಉಪಮುಖ್ಯಮಂತ್ರಿಯಾದರು. ಮಾರ್ಚ್‌ನಲ್ಲಿ ಬಿಜೆಪಿ ಮನೋಹರ್ ಲಾಲ್ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ನಂತರ ಮೈತ್ರಿ ಕೊನೆಗೊಂಡಿತ್ತು. ಇದೀಗ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್ ಅಧಿಕಾರ ಹಿಡಿಯಲು ಪ್ರಯತ್ನಿಸಿದೆ. ಈ ಗೆಲುವಿಗೆ ಪಕ್ಷದ ಪ್ರಣಾಳಿಕೆಗಳೂ ಮಹತ್ವದ ಪಾತ್ರ ವಹಿಸುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ. ಯಾವ ಪಕ್ಷದ ಪ್ರಣಾಳಿಕೆ ಹೇಗಿದೆ? ಎಂಬುದನ್ನು ನೋಡುವುದಾದರೆ…
Advertisement
ಹರಿಯಾಣಕ್ಕೆ ಕಾಂಗ್ರೆಸ್ ಸಪ್ತ ಗ್ಯಾರಂಟಿ!
1. 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಮತ್ತು 25 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು.
2. 18 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡುವ ಜೊತೆಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು.
3. 2 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಡ್ರಗ್ ಮುಕ್ತ ಹರಿಯಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು
4. ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ಪಿಂಚಣಿ 6,000 ರೂ. ಹಾಗೂ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪಿಸಲಾಗುವುದು.
5. ಜಾತಿ ಗಣತಿ ನಡೆಸಲಾಗುವುದು, ಕೆನೆ ಪದರದ ಮಿತಿಯನ್ನು 10 ಲಕ್ಷ ರೂ.ಗೆ ಹೆಚ್ಚಿಸಲಾಗುವುದು.
6. ಕನಿಷ್ಠ ಬೆಂಬಲ ಬೆಲೆ (MSP) ಕಾನೂನುಬದ್ಧವಾಗಿ ಖಾತರಿಪಡಿಸುತ್ತದೆ. ಬೆಳೆ ಪರಿಹಾರ ತಕ್ಷಣ ದೊರೆಯಲಿದೆ.
7. ಬಡ ಕುಟುಂಬಗಳಿಗೆ 100 ಚದರ ಅಡಿಯ ನಿವೇಶನ, 3.5 ಲಕ್ಷ ವೆಚ್ಚದ 2 ಕೋಣೆಗಳ ಮನೆ
Advertisement
ಬಿಜೆಪಿ ಗ್ಯಾರಂಟಿಗಳೇನು?
* ಲಡೋ ಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ 2,100 ರೂಪಾಯಿ ಭತ್ಯೆ ನೀಡುವುದಾಗಿ ಬಿಜೆಪಿ ಭರವಸೆ
* 10 ಕೈಗಾರಿಕಾ ನಗರಗಳನ್ನು ನಿರ್ಮಿಸಲು ಯೋಜನೆ ಈ ಮೂಲಕ ಸ್ಥಳೀಯ ಯುವಕರಿಗೆ 50,000 ಉದ್ಯೋಗಗಳನ್ನು ಸೃಷ್ಟಿ
* ಚಿರಾಯು-ಆಯುಷ್ಮಾನ್ ಯೋಜನೆಯು ಪ್ರತಿ ಕುಟುಂಬಕ್ಕೆ ರೂ 10 ಲಕ್ಷದವರೆಗೆ ಉಚಿತ ಚಿಕಿತ್ಸೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಹೆಚ್ಚುವರಿ ರೂ 5 ಲಕ್ಷವನ್ನು ನೀಡುತ್ತದೆ
* ಕನಿಷ್ಠ ಬೆಂಬಲ ಬೆಲೆಯಲ್ಲಿ 24 ಬೆಳೆಗಳ ಖರೀದಿಯನ್ನು ಖಾತರಿಪಡಿಸಲಾಗಿದೆ
* 200,000 ಸರ್ಕಾರಿ ಉದ್ಯೋಗ ಭರವಸೆ ನೀಡಲಾಗಿದೆ
* ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 500,000 ಮನೆಗಳನ್ನು ನಿರ್ಮಾಣ
* ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್, ಜೊತೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ರೋಗನಿರ್ಣಯ ಸೇವೆಗಳು
* ಪ್ರತಿ ಜಿಲ್ಲೆಗೂ ಒಲಂಪಿಕ್ ಗೇಮ್ಸ್ ನರ್ಸರಿ
* ಹರ್ ಘರ್ ಗೃಹನಿ ಯೋಜನೆ ಅಡಿಯಲ್ಲಿ ಸಿಲಿಂಡರ್‌ಗಳನ್ನು ರೂ 500 ಕ್ಕೆ ನೀಡಲಾಗುತ್ತದೆ
* ಆವಲ್ ಬಾಲಿಕಾ ಯೋಜನೆಯು ಗ್ರಾಮೀಣ ಪ್ರದೇಶದ ಪ್ರತಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗೆ ಸ್ಕೂಟರ್ ಅನ್ನು ಖಾತರಿಪಡಿಸುತ್ತದೆ
* ಪ್ರತಿಯೊಬ್ಬ ಹರ್ಯಾನ್ವಿ ಅಗ್ನಿವೀರ್‌ಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಲಾಗುವುದು