ಚಂಡೀಗಢ: ಹರಿಯಾಣದ ಜಿಂದ್ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಪಕ್ಷದ ವಕ್ತಾರ ರಣ್‍ದೀಪ್ ಸುರ್ಜೇವಾಲಾ ಅವರು ಬಿಜೆಪಿ ಅಭ್ಯರ್ಥಿ ಮುಂದೆ ಸೋತಿದ್ದಾರೆ.
ಒಟ್ಟು 21 ಅಭ್ಯರ್ಥಿಗಳು ಸ್ಪರ್ಧಿಸಿದ್ದ ಈ ಕ್ಷೇತ್ರದಲ್ಲಿ ಸುರ್ಜೇವಾಲ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಜಿಂದ್ ಕ್ಷೇತ್ರದಿಂದ ಕೃಷನ್ ಮಿದ್ಧಾ ಅವರು 49,299 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜನನಾಯಕ್ ಜನತಾ ಪಾರ್ಟಿ (ಜೆಜೆಪಿ)ಯ ದಿಗ್ವಿಜಯ್ ಸಿಂಗ್ ಚೌತಲ ಅವರು 37,681 ಮತ ಗಳಿಸಿದ್ದರೆ, ರಣ್‍ದೀಪ್ ಸುರ್ಜೇವಾಲ್ ಅವರು ಕೇವಲ 31,392 ಮತಗಳನ್ನು ಪಡೆದರು.
Advertisement
Randeep Surjewala on Jind bypoll result: I hope Manohar Lal Khattar and Krishna Middha ji will fulfil the dreams of the people of Jind. I was given a responsibility by the party which I fulfilled to the best of my abilities, I congratulate Krishna Middha ji. pic.twitter.com/O97opemVsY
— ANI (@ANI) January 31, 2019
Advertisement
ಹರಿಯಾಣದಲ್ಲಿ ಒಟ್ಟು 90 ಕ್ಷೇತ್ರವಿದ್ದು, 2014ರ ಚುನಾವಣೆಯಲ್ಲಿ 48 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಎಸ್‍ಎಡಿ ಪಕ್ಷದ ಒಬ್ಬ ಶಾಸಕರ ಬೆಂಬ ಪಡೆದು ಸರ್ಕಾರ ರಚನೆ ಮಾಡಿತ್ತು. ಸದ್ಯ ಉಪಚುನಾವಣೆ ಮೂಲಕ ಬಿಜೆಪಿ ಶಾಸಕರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv