– ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವೂ ಬದಲು
ನವದೆಹಲಿ: ಅಸೋಜ್ ಅಮವಾಸ್ಯೆ ಹಬ್ಬ ಆಚರಿಸುವ ಬಿಷ್ಣೋಯ್ ಸಮುದಾಯದ (Bishnoi community) ದೀರ್ಘಕಾಲದ ಸಂಪ್ರದಾಯವನ್ನು ಪರಿಗಣಿಸಿ ಭಾರತೀಯ ಚುನಾವಣಾ ಆಯೋಗವು (ECI) ಹರಿಯಾಣ ಹಾಗೂ ವಿಧಾನಸಭಾ ಚುನಾವಣೆಗಳ ದಿನಾಂಕದಲ್ಲಿ ಬದಲಾವಣೆ ಘೋಷಿಸಿದೆ.
Advertisement
ಮುಂದಿನ ಅಕ್ಟೋಬರ್ 1 ರಂದು ನಡೆಯಬೇಕಿದ್ದ ಹದಿಯಾಣ ವಿಧಾನಸಭಾ ಚುನಾವಣಾ (Haryana Assembly polls) ದಿನಾಂಕವನ್ನು ಅಕ್ಟೋಬರ್ 5ಕ್ಕೆ ನಿಗದಿಪಡಿಸಿದೆ. ಇನ್ನೂ ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಅಕ್ಟೋಬರ್ 4ರ ಬದಲಿಗೆ ಅಕ್ಟೋಬರ್ 8ಕ್ಕೆ ಪರಿಷ್ಕರಿಸಿದೆ. ಇದನ್ನೂ ಓದಿ: ರೋಟಿ-ಸಬ್ಜಿಯಿಂದ ತೃಪ್ತಿಯಾಗ್ತಿಲ್ಲ, ಮೊಟ್ಟೆ ಊಟ ಕೊಡಿ; ಕೋಲ್ಕತ್ತಾ ವೈದ್ಯೆ ರೇಪ್ ಆರೋಪಿ ಡಿಮ್ಯಾಂಡ್
Advertisement
ಈ ಮೂಲಕ ಚುನಾವಣಾ ಆಯೋಗವು ಗುರು ಜಾಂಬೇಶ್ವರನ ಸ್ಮರಣಾರ್ಥ ಅಸೋಜ್ ಅಮವಾಸ್ಯೆ ಹಬ್ಬ ಆಚರಿಸುವ ಬಿಷ್ಣೋಯ್ ಸಮುದಾಯದ ದೀರ್ಘಕಾಲದ ಸಂಪ್ರದಾಯವನ್ನು ಎತ್ತಿ ಹಿಡಿದಿದೆ. ಇದನ್ನೂ ಓದಿ: ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್ – ಕೋರಮಂಗಲ ಪೊಲೀಸರಿಂದ ಆರೋಪಿ ವಿರುದ್ಧ 1,200 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
Advertisement
Advertisement
ಪಂಜಾಬ್, ರಾಜಸ್ಥಾನ ಮತ್ತು ಹರಿಯಾಣದ ಹಲವಾರು ಕುಟುಂಬಗಳು ತಮ್ಮ ಗುರು ಜಾಂಬೇಶ್ವರನ ಸ್ಮರಣಾರ್ಥ ಅಸೋಜ್ ಅಮವಾಸ್ಯೆ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಹರಿಯಾಣದ ಬಿಷ್ಣೋಯ್ ಸಮುದಾಯದ ಜನ ರಾಜಸ್ಥಾನಕ್ಕೆ ಸಾಮೂಹಿಕವಾಗಿ ತೆರಳಲಿದ್ದಾರೆ. ಅಕ್ಟೋಬರ್ 2ರಂದು ಹಬ್ಬ ಇರುವುದರಿಂದ ಸಿರ್ಸಾ, ಫತೇಹಾಬಾದ್ ಮತ್ತು ಹಿಸಾರ್‌ನಲ್ಲಿ ವಾಸಿಸುವ ಸಾವಿರಾರು ಬಿಷ್ಣೋಯಿ ಕುಟುಂಬಗಳು ಅಕ್ಟೋಬರ್ 1ರಂದು (ನಿಗದಿಪಡಿಸಿದ್ದ ಮತದಾನದ ದಿನ) ರಾಜಸ್ಥಾನಕ್ಕೆ ಪ್ರಯಾಣಿಸಲಿವೆ.
ಅಲ್ಲದೇ ಅದು ಶತಮಾನಗಳ ಸಂಪ್ರದಾಯ ಹಬ್ಬವಾಗಿರುವುದರಿಂದ ಅವರು ಮತದಾನವನ್ನೂ ನಿರಾಕರಿಸಲು ಮುಂದಾಗಿದ್ದಾರೆ. ಇದರಿಂದ ಮತದಾರರ ಭಾಗವಹಿಸುವಿಕೆಯನ್ನು ಕಡಿಮೆ ಮಾಡಬಹುದು. ಹಾಗಾಗಿ ಸಮುದಾಯಗಳ ಭಾವನೆ ಗೌರವಿಸುವ ಉದ್ದೇಶದಿಂದ ಚುನಾವಣಾ ಆಯೋಗ ಚುನಾವಣಾ ದಿನಾಂಕ ಬದಲಾವಣೆ ಮಾಡಿದೆ ಎಂದು ಆಯೋಗ ತಿಳಿಸಿದೆ. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್