ಚಂಡೀಗಢ: ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಹೆಸರುವಾಸಿಯಾದ ಹರ್ಯಾಣ ಸಚಿವ ಅನಿಲ್ ವಿಜ್‍ರವರು ರಾಹುಲ್ ಗಾಂಧಿಯವರನ್ನು ದೇಶದಲ್ಲಿ ಬಲಿ ತೆಗೆದುಳ್ಳುತ್ತಿರುವ ನಿಪಾ ವೈರಸ್ ಸೋಂಕಿಗೆ ಹೋಲಿಕೆ ಮಾಡಿದ್ದಾರೆ.
ಅನಿಲ್ ವಿಜ್ ಅವರು “ರಾಹುಲ್ ಗಾಂಧಿಯವರು ನಿಪಾ ವೈರಸ್ ಇದ್ದಂತೆ. ಯಾವ ಪಕ್ಷದ ಜೊತೆ ಅವರು ಮಾತುಕತೆ ನಡೆಸುತ್ತಾರೋ ಆ ಪಕ್ಷ ಬಲಿಯಾಗುತ್ತದೆ. ಮೈತ್ರಿಗಾಗಿ ಪಕ್ಷಗಳು ಸಂಪರ್ಕಸಿದರೂ ಆ ಪಕ್ಷಗಳು ಬಲಿಯಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡುವುದರ ಜೊತೆಗೆ ಆ ಟ್ವೀಟ್ ಅನ್ನು ಪಿನ್ ಮಾಡಿದ್ದಾರೆ.
Rahul Gandhi is similar to #NipahVirus, which ever Party he comes in contact with, that Party will be finished. They (parties) are trying to come together (in alliance) but they will be finished off: Haryana Minister Anil Vij pic.twitter.com/wt01o8npmc
— ANI (@ANI) May 29, 2018
ಈ ರೀತಿಯ ವಿವಾದಾತ್ಮಕ ಹೇಳಕೆಗಳು ಅನಿಲ್ ವಿಜ್ ಇವರಿಗೆ ಹೊಸದೇನು ಅಲ್ಲ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ, ನರೇಂದ್ರ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತಕ್ಕೆ ಕಾಂಗ್ರೆಸ್‍ನವರೆ ಅಡಿಪಾಯ ಹಾಕಿಕೊಟ್ಟಿದ್ದಾರೆಂದು ಹೇಳಿಕೆ ನೀಡಿದ್ದರು.
ಒಮ್ಮೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದಾಗ ಅವರು ತಮ್ಮ ನಾಯಿಗೆ ಬಳಸಿದ ತಟ್ಟೆಯನ್ನೇ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಾರೆ. ತಮ್ಮ ಮನೆಯ ನಾಯಿಗೂ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸವಿಲ್ಲವೆಂಬ ಹೇಳಿಕೆಯನ್ನು ನೀಡಿದ್ದರು.
राहुल गांधी #निपाह वायरस के समान है । जो भी राजनीतिक पार्टी इसके सम्पर्क में आएगी वह फना हो जाएगी ।
— ANIL VIJ MINISTER HARYANA (@anilvijminister) May 27, 2018
ಒಂದು ತಿಂಗಳ ಹಿಂದೆ ಅವರು ಭಗತ್‍ಸಿಂಗ್ ಮತ್ತು ಲಾಲಾ ಲಜಪತರಾಯ್‍ರವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಆದರೆ ನೆಹರು ಮತ್ತು ಗಾಂಧಿಯವರು ದೇಶಕ್ಕಾಗಿ ಒಂದು ಕಟ್ಟಿಗೆಯನ್ನು ನೀಡಿಲ್ಲವೆಂದು ಹೇಳಿಕೆ ನೀಡಿದ್ದರು.
ಕಳೆದ ವರ್ಷ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಅವರು “ಭಾರತೀಯಳಾಗಿರುವುದು ನಿಮಗೆ ನಾಚಿಕೆಯಾಗಿದ್ದರೆ ಹೋಗಿ ಸಮುದ್ರಕ್ಕೆ ಹಾರಿ’ ಎಂದು ಹೇಳಿಕೆ ನೀಡಿದ್ದರು.