ಚಂಡೀಗಢ: ಪಿಂಚಣಿ ನಿಲ್ಲಿಸಲು ಬದುಕಿದ್ದ ವ್ಯಕ್ತಿಯನ್ನು ಸತ್ತಿದ್ದಾನೆಂದು ದಾಖಲೆ ಸೃಷ್ಟಿಸಿದ್ದ ಸರ್ಕಾರದ ಅಧಿಕಾರಿಗಳ ವಿರುದ್ಧ 102 ವಯಸ್ಸಿನ ವೃದ್ಧ ಬೀದಿಗಿಳಿದು ಪ್ರತಿಭಟಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ರೋಹ್ಟಕ್ ಜಿಲ್ಲೆಯ ದುಲಿ ಚಂದ್ ಅವರು ತಾನು ಜೀವಂತವಾಗಿರುವುದನ್ನು ಸಾಬೀತುಪಡಿಸಲು ಮಾಧ್ಯಮದ ಮುಂದೆ ಕಾಣಿಸಿಕೊಂಡರು. ನಂತರ ನಗರದಲ್ಲಿ ಮೆರವಣಿಗೆ ನಡೆಸಿ ತಮ್ಮ ಹಕ್ಕೊತ್ತಾಯ ಮಂಡಿಸಿ ಶೀಘ್ರವೇ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೇಸರಿ ಶಾಲು ಧರಿಸುವುದು ನಂಬಿಕೆಯ ಆಕ್ರಮಣಕಾರಿ ಪ್ರದರ್ಶನ – ಹಿಜಬ್ ವಿಚಾರಣೆ ವೇಳೆ ವಕೀಲ ದೇವದತ್ ಕಾಮತ್ ವಾದ
Advertisement
Advertisement
ನಾನು ಮಾರ್ಚ್‌ನಲ್ಲಿ ನನ್ನ ಕೊನೆಯ ವೃದ್ಧಾಪ್ಯ ವೇತನ ಪಡೆದಿದ್ದೇನೆ. ಅದರ ನಂತರ ಸರ್ಕಾರಿ ದಾಖಲೆಗಳು ನಾನು ಸತ್ತಿದ್ದೇನೆ ಎಂದು ತೋರಿಸಿದ್ದರಿಂದ ನನ್ನ ಪಿಂಚಣಿಯನ್ನು ನಿಲ್ಲಿಸಲಾಯಿತು. ನಾನು ಬದುಕಿದ್ದೇನೆಂದು ಪಿಂಚಣಿಗಾಗಿ ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ ಎಂದು ಚಂದ್ ಅವರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಕುಟುಂಬದ ಐಡಿ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಸೇರಿದಂತೆ ಅವರ ಗುರುತಿನ ಪುರಾವೆಗಳನ್ನು ಮಾಧ್ಯಮದ ಮುಂದೆ ಹಾಜರುಪಡಿಸಿದ್ದಾರೆ.
Advertisement
ಒಂದು ತಿಂಗಳ ಹಿಂದೆಯೇ ಹರಿಯಾಣ ಮುಖ್ಯಮಂತ್ರಿಗಳ ಕುಂದುಕೊರತೆ ಪರಿಹಾರ ಮತ್ತು ನಿಗಾ ವ್ಯವಸ್ಥೆಗೆ ದೂರು ನೀಡಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರ ಮೊಮ್ಮಗ ಹೇಳಿದ್ದಾರೆ. ಇದನ್ನೂ ಓದಿ: ಪಾರ್ವತಿ ವೇಷದಲ್ಲಿ ನರ್ತಿಸುತ್ತಿದ್ದ 20ರ ಹುಡುಗ- ಹೃದಯಾಘಾತದಿಂದ ಸ್ಟೇಜ್‍ನಲ್ಲೇ ಕುಸಿದು ಸಾವು
Advertisement
ಚಂದ್ ಅವರ ವೃದ್ಧಾಪ್ಯ ವೇತನ ನೀಡುವುದನ್ನು ಮುಂದುವರಿಸಬೇಕು. ಇಂತಹ ವಯೋವೃದ್ಧರಿಗೆ ಪಿಂಚಣಿ ನಿಲ್ಲಿಸಿ ಕಿರುಕುಳ ನೀಡುತ್ತಿರುವುದು ವಿಷಾದನೀಯ. ಈ ಕುರಿತು ಮುಖ್ಯಮಂತ್ರಿಗಳ ಕುಂದುಕೊರತೆ ನಿವಾರಣಾ ಕೋಶಕ್ಕೆ ದೂರು ನೀಡಿದರೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಹರಿಯಾಣ ಘಟಕದ ಮಾಜಿ ಅಧ್ಯಕ್ಷ ನವೀನ್ ಜೈಹಿಂದ್ ಆರೋಪಿಸಿದ್ದಾರೆ.