– ಎಮ್ಮೆ ಮಾರಿ ಕಷ್ಟದ ಕಥೆ ಬಿಚ್ಚಿಟ್ಟ ಮಾಲೀಕ
ಚಂಡೀಗಢ: ಹಾಲು ಉತ್ಪಾದನೆಯಲ್ಲಿ ವಿಶ್ವ ದಾಖಲೆ ಬರೆದಿದ್ದ ಹರಿಯಾಣದ ಮುರ್ರಾ ತಳಿಯ ಸರಸ್ವತಿ ಹೆಸರಿನ ಎಮ್ಮೆ 51 ಲಕ್ಷ ರೂ.ಗೆ ಮಾರಾಟವಾಗಿದೆ.
ಹಿಸಾರ್ ಜಿಲ್ಲೆಯ ಲಿಟಾನಿಯ ರೈತ ಸುಖ್‍ಬೀರ್ ಸಿಂಗ್ ಧಂಡಾ ಅವರ ಮಾಲೀಕತ್ವದ ಸರಸ್ವತಿ ದಿನಕ್ಕೆ 33.131 ಕೆಜಿ ಹಾಲು ನೀಡುವ ಮೂಲಕ ಪಾಕಿಸ್ತಾನ ಎಮ್ಮೆಯ ದಾಖಲೆಯನ್ನು ಮುರಿತ್ತು. ಈ ಎಮ್ಮೆಯನ್ನು ಸದ್ಯ ಲುಧಿಯಾನದ ಸಿಕ್ ಪವಿತ್ರ ಕ್ಷೇತ್ರಕ್ಕಾಗಿ ಸಿಕ್ ಸಮುದಾಯ ಖರೀದಿಸಿದೆ.
Advertisement
Advertisement
ವಾಸ್ತವವಾಗಿ, ಸುಖ್‍ಬೀರ್ ಅವರು ಕೆಲವು ದಿನಗಳ ಹಿಂದೆ ಸರಸ್ವತಿಯೊಂದಿಗೆ ಲುಧಿಯಾನದ ಜಾಗ್ರಾವ್‍ನಲ್ಲಿ ನಡೆದ ಡೈರಿ ಮತ್ತು ಅಗ್ರಿ ಎಕ್ಸ್‍ಪೋದಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿ ಸರಸ್ವತಿ 33.131 ಕೆಜಿ ಹಾಲು ನೀಡುವ ಮೂಲಕ ವಿಶ್ವ ದಾಖಲೆಯನ್ನು ಮಾಡಿತ್ತು. ಹೀಗಾಗಿ ಸರಸ್ವತಿ ಮಾಲೀಕ ಸುಖ್‍ಬೀರ್ ಅವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡಿ ಗೌರವಿಸಲಾಗಿತ್ತು. ಇದಕ್ಕೂ ಮೊದಲು ಅಂದ್ರೆ 2019ರ ಡಿಸೆಂಬರ್ ತಿಂಗಳಿನಲ್ಲಿ 32.050 ಕೆಜಿ ಹಾಲು ನೀಡಿದ ಪಾಕಿಸ್ತಾನದ ಎಮ್ಮೆಗಿಂತ ಅತಿ ಹೆಚ್ಚು ಹಾಲು ನೀಡಿದ ದಾಖಲೆ ಮಾಡಿತ್ತು.
Advertisement
1.30 ಲಕ್ಷ ರೂ, ಖರೀದಿಸಿದ್ದ ಎಮ್ಮೆ:
ಬಾರ್ವಾಲಾದ ಖೋಖಾ ಗ್ರಾಮದ ರೈತ ಗೋಪಿರಾಮ್ ಅವರಿಂದ ನಾಲ್ಕು ವರ್ಷಗಳ ಹಿಂದೆ ಸರಸ್ವತಿಯನ್ನು 1.30 ಸಾವಿರ ರೂಪಾಯಿಗೆ ಖರೀದಿಸಿದ್ದೆ. ಸರಸ್ವತಿ ಈಗಾಗಲೇ ಕರುಗಳಿಗೆ ಜನ್ಮ ನೀಡಿದೆ. ಅಷ್ಟೇ ಅಲ್ಲದೆ ಹಾಲು ಮತ್ತು ವೀರ್ಯವನ್ನು ಮಾರಾಟ ಮಾಡುವ ಮೂಲಕ ಒಂದು ಲಕ್ಷ ರೂಪಾಯಿಗೂ ಅಧಿಕ ಗಳಿಸಿದ್ದೇನೆ ಎಂದು ಮಾಲೀಕ ಸುಖ್‍ಬೀರ್ ತಿಳಿಸಿದ್ದಾರೆ.
Advertisement
ಎಮ್ಮೆ ಮಾರಿದ್ಯಾಕೆ?
ಸರಸ್ವತಿಯನ್ನು ಯಾರಾದರು ಕಳವು ಮಾಡುತ್ತಾರೆ ಎಂಬ ಆತಂಕ ಸುಖ್‍ಬೀರ್ ಅವರಿಗೆ ಇತ್ತು. ಜೊತೆಗೆ ಒಂದು ಕೋಟಿ ರೂಪಾಯಿಗೆ ಸಹ ಎಮ್ಮೆಯನ್ನು ಮಾರಾಟ ಮಾಡಲು ಅವರು ಸಿದ್ಧರಿರಲಿಲ್ಲ. ಹೀಗಾಗಿ ಎಮ್ಮೆ ಮಾರಾಟ ಮಾಡುವ ಮೊದಲು ರೈತ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಿಸಾರ್ ಅಷ್ಟೇ ಅಲ್ಲದೆ ಉತ್ತರ ಪ್ರದೇಶ, ಪಂಜಾಬ್ ಹಾಗೂ ರಾಜಸ್ಥಾನದ ಸುಮಾರು 700 ರೈತರು ಭಾಗವಹಿಸಿದ್ದರು. ಈ ವೇಳೆ ಲುಧಿಯಾನದ ಸಿಕ್ ಪವಿತ್ರ ಕ್ಷೇತ್ರಕ್ಕಾಗಿ ಸಿಕ್ ಸಮುದಾಯ ಎಮ್ಮೆ ಸರಸ್ವತಿಯನ್ನು ಖರೀದಿಸಿದೆ.
ಅನೇಕ ದಾಖಲೆ ಬರೆದ ಸರಸ್ವತಿ:
ಸರಸ್ವತಿ ಈ ಮೊದಲು ಸುಖ್‍ಬೀರ್ ಸಿಂಗ್ ಧಂಡಾ ಅವರಿಗೆ ಅನೇಕ ಹೆಮ್ಮೆಪಡುವಂತಹ ದಾಖಲೆಗಳನ್ನು ಮಾಡಿದೆ. ಈ ಕುರಿತು ಸುಖ್‍ಬೀರ್ ಸಿಂಗ್ ಮಾತನಾಡಿ, ‘ಸರಸ್ವತಿ ಕಳೆದ ವರ್ಷ ಹಿಸಾರ್‍ನಲ್ಲಿ 29.31 ಕೆಜಿ ಹಾಲು ನೀಡುವ ಮೂಲಕ ಪ್ರಥಮ ಬಹುಮಾನ ಗೆದ್ದಿತ್ತು. ಹಿಸಾರ್‍ನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಬಫಲೋ ರಿಸರ್ಚ್ ಕಾರ್ಯಕ್ರಮದಲ್ಲಿ ಸರಸ್ವತಿ 28.7 ಕೆಜಿ ಹಾಲು ನೀಡುವ ಮೂಲಕ ಅಗ್ರಸ್ಥಾನ ಪಡೆಯಿತು. ಹರಿಯಾಣ ಜಾನುವಾರು ಅಭಿವೃದ್ಧಿ ಮಂಡಳಿಯಲ್ಲಿ 28.8 ಕೆಜಿ ಹಾಲು ಉತ್ಪಾದನೆಯೊಂದಿಗೆ ಸ್ಪರ್ಧೆಯನ್ನು ಗೆದ್ದಿತ್ತು ಎಂದು ತಿಳಿಸಿದ್ದಾರೆ.