ಚಂಡೀಗಢ: ಓದಿಗೆ ತಕ್ಕಂತೆ ಕೆಲಸ ಮಾಡಬೇಕು ಎಂಬುದು ಎಲ್ಲರ ಕನಸು. ಆದರೆ ಕೆಲಸ ಸಿಗದಿದ್ದಾಗ ಜನರು ಸಿಕ್ಕ ಕೆಲಸವನ್ನು ಮಾಡಿಕೊಂಡು ಅತೃಪ್ತಿಯಿಂದ ಒಳಲುತ್ತಾರೆ. ಆದರೆ ಹರಿಯಾಣದ ಇಂಜಿನಿಯರ್ ಯುವಕರು ಸಿಕ್ಕ ಕೆಲಸದಲ್ಲಿ ತೃಪ್ತಿಯಿಲ್ಲವೆಂದು ಬಿರಿಯಾನಿ ಸ್ಟಾಲ್ ಓಪನ್ ಮಾಡಿ ನಿರುದ್ಯೋಗಿಗಳಿಗೆ ಸ್ಫೂರ್ತಿಯಾಗಿದ್ದಾರೆ.
ನಮ್ಮಲ್ಲಿ ಸಾಮಾನ್ಯವಾಗಿ ಹೆಚ್ಚು ಜನರು ತಮ್ಮ ಉದ್ಯೋಗಗಳ ಬಗ್ಗೆ ಅತೃಪ್ತಿ ಇದ್ದರೂ, ತಮಗೆ ಇಷ್ಟವಾದ ಕೆಲಸ ಮಾಡಲು ಬಂಡವಾಳ ಹಾಕುವ ಧೈರ್ಯವಿರುವುದಿಲ್ಲ. ಆದರೆ ಹರಿಯಾಣದ ಸೋನೆಪತ್‍ನಲ್ಲಿ ಇಬ್ಬರು ಇಂಜಿನಿಯರ್ ಓದಿದ ಯುವಕರು ತಮಗೆ ಬರುತ್ತಿದ್ದ ಸಂಬಳದ ಬಗ್ಗೆ ಅತೃಪ್ತಿ ಹೊಂದಿದ್ದರು. ಈ ಹಿನ್ನೆಲೆ ಅವರು ತಮ್ಮ ಕೆಲಸವನ್ನು ಬಿಟ್ಟು ಫುಡ್ ಸ್ಟಾಲ್ ತೆಗೆಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: EVMಗಳಲ್ಲಿ ಸಮಸ್ಯೆಯಿಲ್ಲ, ಜನರ ತಲೆಯೊಳಗಿನ ಚಿಪ್ಪಿನಲ್ಲಿ ಸಮಸ್ಯೆಯಿದೆ: ಫಲಿತಾಂಶದ ಬಗ್ಗೆ ಓವೈಸಿ ಪ್ರತಿಕ್ರಿಯೆ
Advertisement
Advertisement
ಇಂಜಿನಿಯರ್‌ಗಳಾದ ರೋಹಿತ್ ಮತ್ತು ಸಚಿನ್ ಒಟ್ಟಿಗೆ ಬಿರಿಯಾನಿ ಸ್ಟಾಲ್ ಓಪನ್ ಮಾಡಿದ್ದಾರೆ. ಈ ಸ್ಟಾಲ್‍ಗೆ ಇವರು ‘ಇಂಜಿನಿಯರ್ ವೆಜ್ ಬಿರಿಯಾನಿ’ ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ ಗಮನಾರ್ಹ ವಿಷಯವೆಂದರೆ ಇಬ್ಬರೂ ಐದು ವರ್ಷಗಳ ಕಾಲ ಇಂಜಿನಿಯರಿಂಗ್ ಓದಿದ್ದಾರೆ. ರೋಹಿತ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದಾಗ, ಸಚಿನ್ ಬಿ.ಟೆಕ್ ಓದಿದ್ದರು. ಆದರೆ, ಕೆಲಸದಲ್ಲಿ ತೃಪ್ತರಾಗದ ಹಿನ್ನೆಲೆ ಬಿರಿಯಾನಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಪ್ರಸ್ತುತ ಅವರು ಈ ಕೆಲಸದಿಂದ ತುಂಬಾ ಸಂತೋಷದಿಂದ ಇದ್ದೇವೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿ ಸಂತೋಷ ಹಂಚಿಕೊಂಡಿದ್ದಾರೆ.
Advertisement
Advertisement
ಆಹಾರದ ವಿಷಯಕ್ಕೆ ಬಂದರೆ, ತಮ್ಮ ಬಿರಿಯಾನಿಗೆ ಹೆಚ್ಚು ಎಣ್ಣೆಯನ್ನು ಹಾಕುವುದಿಲ್ಲ. ಅರ್ಧ ಮತ್ತು ಪೂರ್ಣ ಪ್ಲೇಟ್‍ಗೆ ಕ್ರಮವಾಗಿ 50 ಮತ್ತು 70 ರೂ. ನಮ್ಮಲ್ಲಿ ಎರಡು ವಿಧದ ಬಿರಿಯಾನಿ-ವಿಶೇಷ ಗ್ರೇವಿ ವೆಜ್ ಬಿರಿಯಾನಿ ಮತ್ತು ಆಚಾರಿ ವೆಜ್ ಬಿರಿಯಾನಿಗಳನ್ನು ಮಾರಾಟ ಮಾಡಲಾಗುತ್ತೆ ಎಂದು ತಮ್ಮ ವ್ಯಾಪಾರದ ಬಗ್ಗೆ ವಿವರಿಸಿದ್ದಾರೆ. ಇದನ್ನೂ ಓದಿ: 4 ರಾಜ್ಯಗಳಲ್ಲಿ ಬಿಜೆಪಿ ವಿಜಯ – ಗುಜರಾತ್‍ನಲ್ಲಿ ಮೋದಿ ಭರ್ಜರಿ ರೋಡ್ ಶೋ
ಗ್ರಾಹಕರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾವು ಆಹಾರವನ್ನು ತಯಾರಿಸುತ್ತೇವೆ. ನಮ್ಮ ಸ್ಟಾಲ್‍ನಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬಳಸಲಾಗುತ್ತೆ. ನಮ್ಮ ಶ್ರಮದ ಫಲವಾಗಿ ಇಂದು ಹಲವು ಜನರು ನಮ್ಮ ಸ್ಟಾಲ್ ಹುಡುಕಿಕೊಂಡು ಬರುತ್ತಾರೆ. ಅದಕ್ಕೆ ನಮ್ಮ ಸ್ಟಾಲ್‍ನನ್ನು ಇನ್ನೂ ವಿಸ್ತರಿಸಬೇಕು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.