ಚಂಡೀಗಢ: ಕಾಂಗ್ರೆಸ್ ಚಾಲಕನಿಲ್ಲದ ರೈಲು, ಪೈಲಟ್ ಇಲ್ಲದ ವಿಮಾನದಂತಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವ್ಯಂಗ್ಯವಾಡಿದ್ದಾರೆ. ಹರ್ಯಾಣದ ಜುಲಾನಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಸಿಎಂ ಯೋಗಿ ನೇರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಅಕ್ಟೋಬರ್ 21ರಂದು ನಡೆಯುವ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದಾರೆ. ಜುಲನಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಾ, ಡ್ರೈವರ್ ಇಲ್ಲದ ಚಾಲಕ, ಪೈಲಟ್ ಇಲ್ಲದ ವಿಮಾನದಂತೆ ಕಾಂಗ್ರೆಸ್ ಆಗಿದೆ. ವಿರೋಧ ಪಕ್ಷದಲ್ಲಿ ನಾಯಕನೇ ಇಲ್ಲ ಎಂದು ಕಿಚಾಯಿಸಿದರು.
Advertisement
Advertisement
ಕಾಂಗ್ರೆಸ್ ನಾಯಕರಿಗೆ ಭಾರತ್ ಮಾತಾ ಕೀ ಜೈ ಎಂದು ಹೇಳಲು ನಾಚಿಕೆ ಬರುತ್ತೆ. ಈ ನಾಯಕರು ದೇಶದ ಗೌರವವನ್ನು ಹೆಚ್ಚಿಸುವ ವ್ಯಕ್ತಿಗಳನ್ನು ಅಗೌರವಿಸುತ್ತಾರೆ. ಕಾಂಗ್ರೆಸ್ ರಕ್ತದಲ್ಲಿಯೇ ಭ್ರಷ್ಟಾಚಾರವಿದೆ. ಕಾಮನ್‍ವೆಲ್ತ್ ಗೇಮ್ಸ್, 2ಜಿ ಹಗರಣ, ಹರ್ಯಾಣದಲ್ಲಿ ಭೂಕಬಳಿಕ ಆರೋಪದಲ್ಲಿ ಕಾಂಗ್ರೆಸ್ ಭಾಗಿಯಾಗಿದೆ ಎಂದು ಆರೋಪಿಸಿದರು.
Advertisement
ಈ ಹಿಂದೆ ಹರ್ಯಾಣದಲ್ಲಿ ಕೈ ಸರ್ಕಾರವಿದ್ದಾದ, ಕಾಂಗ್ರೆಸ್ ಅಳಿಯ ಗುರುಗ್ರಾಮ, ರೋಹ್ಟಕ್, ಪಂಚಕುಲದಲ್ಲಿ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿದರು. ಕಾಂಗ್ರೆಸ್‍ಗೆ ರಾಷ್ಟ್ರೀಯತೆ, ಜಗತ್ತಿನೊಂದಿಗೆ ದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿಯೇ ಇಲ್ಲ. ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳೇ ಕಾಂಗ್ರೆಸ್‍ನ ಕುಟುಂಬವಾಗಿದೆ ಎಂದು ಆರೋಪಿಸಿ ಕಿಡಿಕಾರಿದರು.