– ಇವರಲ್ಲಿ ಕೆಲವರಿಗೆ ಬರಲ್ಲ ಡ್ರೈವಿಂಗ್
ಚಂಡೀಗಢ: ಹರಿಯಾಣದ (Hariyana) ಪಂಚಕುಲದಲ್ಲಿರುವ ಫಾರ್ಮಾಸ್ಯುಟಿಕಲ್ ಕಂಪನಿಯು (Pharmaceutical Company) ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳನ್ನು ನೀಡುವ ಮೂಲಕ ಭಾರೀ ಸುದ್ದಿಯಾಗಿದೆ.
ತಮ್ಮ ಉದ್ಯೋಗಿಗಳನ್ನು ಸೆಲೆಬ್ರಿಟಿಗಳು ಎಂದು ಕರೆದಿರುವ ಕಂಪನಿಯ ನಿರ್ದೇಶಕ ಎಂ.ಕೆ ಭಾಟಿಯಾ (M. K Bhatia) ಅವರು, 12 ಮಂದಿ ಉತ್ತಮ ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
Advertisement
Advertisement
ಇಷ್ಟು ಮಾತ್ರವಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಕೂಡ ಫಾರ್ಮಾಸ್ಯುಟಿಕಲ್ ಕಂಪನಿ, ಮಿಟ್ಸ್ ಹೆಲ್ತ್‍ಕೇರ್ 38ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿಗೆ ಕಾರುಗಳನ್ನು ಗಿಫ್ಟ್ (Car Gift) ಮಾಡುವಯೋಜನೆ ಹಾಕಿಕೊಂಡಿದೆ. ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದಲೇ ಪಾಂಡ್ಯ ಔಟ್ – ಬದಲಿ ಆಟಗಾರನಾಗಿ ಈ ಕನ್ನಡಿಗ ಆಯ್ಕೆ
Advertisement
ಈ ಬಾರಿ ದೀಪಾವಳಿಗೆ ನೀಡಿರುವ ಉಡಗೊರೆಯ ಲಿಸ್ಟ್ ನಲ್ಲಿ ಕಂಪನಿ ಆಫೀಸ್ ಬಾಯ್ (Office Boy) ಕೂಡ ಇದ್ದಾರೆ. ಈ ಮೂಲಕ ಕಂಪನಿಯ ಮಾಲೀಕರು, ಕಂಪನಿಯ ಪ್ರತಿಯೊಬ್ಬ ಉದ್ಯೋಗಿಯನ್ನೂ ಸಮಾನವಾಗಿ ನೋಡುತ್ತಿದ್ದಾರೆ ಎಂಬುದನ್ನು ಗಮನಿಸಬಹುದು.
Advertisement
ಕಂಪನಿಯ ಯಶಸ್ಸಿಗೆ ಎಲ್ಲಾ ಉದ್ಯೋಗಿಗಳು ಶ್ರಮಿಸಿದ್ದಾರೆ. ಉದ್ಯೋಗಿಗಳ ಕಠಿಣ ಪರಿಶ್ರಮ, ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಹಾಗೂ ನಿಷ್ಠೆಯಿಂದ ಮಾಡಿದ ಕೆಲಸದಿಂದ ಇಂದು ಕಂಪನಿ ಯಶಸ್ಸು ಕಂಡಿದೆ. ಕಂಪನಿ ಆರಂಭವಾದಾಗಿನಿಂದ ಜೊತೆ ಇದ್ದ ಉದ್ಯೋಗಿಗಳು ಕೂಡ ಇದಕ್ಕೆ ಕಾರಣಕರ್ತರು ಎಂದು ಅವರು ಹೇಳಿದ್ದಾರೆ. ಭಾಟಿಯಾ ಅವರ ಪ್ರಕಾರ, ಈ ಕಾರುಗಳು ಕೇವಲ ದೀಪಾವಳಿ ಉಡುಗೊರೆಯಾಗಿಲ್ಲ. ಆದರೆ ಕಂಪನಿಯಲ್ಲಿ ಅವರ ಅಚಲವಾದ ಬದ್ಧತೆ ಮತ್ತು ನಂಬಿಕೆಗೆ ಪ್ರತಿಫಲವಾಗಿದೆ.
ಕುತೂಹಲಕಾರಿ ವಿಷವೆಂದರೆ, ಕಾರು ಗಿಫ್ಟ್ ಪಡೆದ ಕೆಲವರಿಗೆ ಡ್ರೈವಿಂಗ್ ಕೂಡ ಬರಲ್ಲ. ಅವರು ಕನಸಿನಲ್ಲಿಯೂ ಇಂಥದ್ದೊಂದು ಉಡುಗೊರೆ ಸಿಗುತ್ತೆ ಎಂದು ಯೋಚಿಸಿರಲಿಲ್ಲ. ಹೀಗಾಗಿ ಈ ಅನಿರೀಕ್ಷಿತ ಉಡುಗೊರೆಯಿಂದ ಅವರು ದಿಗ್ಭ್ರಮೆಗೊಂಡಿದ್ದಾರೆ.
Web Stories