– 70ಕ್ಕೂ ಹೆಚ್ಚು ಮಂದಿಗೆ ಗಾಯ
ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣ (Communal Clashes In Haryana) ತತ್ತರಿಸಿದೆ. ನಿನ್ನೆಯಿಂದ ನೂಹ್ ಮತ್ತು ಗುರುಗ್ರಾಮ್ (Gurugram) ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಲೆಕ್ಕಿಸದೇ ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡ್ತಿದ್ದಾರೆ. ಮಂಗಳವಾರ 200 ಮಂದಿಯನ್ನೊಳಗೊಂಡ ಶಸ್ತ್ರಸಜ್ಜಿತ ಗುಂಪೊಂದು ಏಕಾಏಕಿ ದಾಳಿ ನಡೆಸಿದ್ದು, ಬಹಳಷ್ಟು ಹಾನಿಯುಂಟು ಮಾಡಿದೆ.
Advertisement
Advertisement
ಗುರುಗ್ರಾಮದಲ್ಲಿ ಮಂಗಳವಾರವೂ ಆಕ್ಷೇಪಾರ್ಹ ಘೋಷಣೆಗಳನ್ನ ಕೂಗುತ್ತಾ ರೆಸ್ಟೋರೆಂಟ್, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ನಿನ್ನೆ ರಾತ್ರಿಯಿಂದಲೂ ನಡೆಯುತ್ತಿರುವ ಘರ್ಷಣೆಯಲ್ಲಿ ಈವರೆಗೆ ಐವರು ಬಲಿಯಾಗಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ನಿಲ್ಲದ ಕೋಮು ಘರ್ಷಣೆ – ನಾಲ್ವರು ಸಾವು; 30 ಕ್ಕೂ ಹೆಚ್ಚು ಮಂದಿಗೆ ಗಾಯ
Advertisement
ಸೋಮವಾರ ಸಂಜೆ ಮೆವಾತ್‌ನಲ್ಲಿ ವಿಹೆಚ್‌ಪಿ- ಬಜರಂಗದಳದ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟದಿಂದಾಗಿ ನಡೆದ ಘರ್ಷಣೆಯಲ್ಲಿ ಇಬ್ಬರು ಹೋಂಗಾರ್ಡ್ಗಳು ಸಾವನ್ನಪ್ಪಿದ್ರು. ರಾತ್ರಿ ಮತ್ತೆ ನಡೆದ ಘರ್ಷಣೆಯಲ್ಲಿ ಇನ್ನಿಬ್ಬರು ಬಲಿಯಾಗಿದ್ದಾರೆ. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.
Advertisement
ಹತ್ತಾರು ವಾಹನಗಳು ಧಗಧಗಿಸಿವೆ. ಸಿಕ್ಕ-ಸಿಕ್ಕ ಅಂಗಡಿಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಗುರುಗ್ರಾಮದ ಸೆಕ್ಟರ್ 57ರಲ್ಲಿ ಮಸೀಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಮಸೀದಿಯ ಇಮಾಮ್ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಈಗಲೂ ಪರಿಸ್ಥಿತಿ ಉದ್ವಿಗ್ನವಾಗಿಯೇ ಇದೆ. ನೂಹ್-ಗುರುಗ್ರಾಮ ಜಿಲ್ಲೆಗಳಲ್ಲಿ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಇದನ್ನೂ ಓದಿ: ಮತ್ತೊಂದು ಬಾರ್ಡರ್ ಲವ್ – ಭಾರತದ ಪ್ರೇಮಿಗಾಗಿ ಲಂಕಾದಿಂದ ಹಾರಿ ಬಂದ ಲಂಕಿಣಿ!
ವದಂತಿಗಳನ್ನು ತಡೆಯೋ ಸಲುವಾಗಿ ಬುಧವಾರ ರಾತ್ರಿವರೆಗೂ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ಫೆಬ್ರವರಿ ಘಟಿಸಿದ ಜುನೈದ್, ನಸೀರ್ ಹತ್ಯೆಯ ಆರೋಪಿ ಮೋನು ಮನೆಸರ್ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು ಹಿಂಸಾಚಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಆದ್ರೆ, ನಾನು ಈ ರ‍್ಯಾಲಿಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಮೋನು ಹೇಳ್ಕೊಂಡಿದ್ದಾನೆ. ಇನ್ನು, ಹಿಂಸಾಚಾರ ಸಂಬಂಧ ಪರಸ್ಪರ ಕೆಸರೆರಚಾಟಗಳು ನಡೀತಿವೆ. ಸಿಎಂ ಖಟ್ಟರ್ ತುರ್ತು ಸಭೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
Web Stories