ಚಂಡೀಗಢ: ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ಬೆಂಗಾವಲು ಪಡೆಯ ನಾಲ್ಕು ವಾಹನಗಳ ‘ವಿಐಪಿ’ ನೋಂದಣಿ ಸಂಖ್ಯೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಹಿಂಪಡೆಯುವುದಾಗಿ ಮಂಗಳವಾರ ಘೋಷಿಸಿದ್ದಾರೆ.
Advertisement
ಮಂಗಳವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹರಿಯಾಣ ಮೋಟಾರು ವಾಹನ ನಿಯಮ-1993ರ ತಿದ್ದುಪಡಿ ಕುರಿತು ಚರ್ಚೆಯಾಗುತ್ತಿತ್ತು. ಈ ವೇಳೆ ಮನೋಹರ್ ಲಾಲ್ ಅವರು, ಇಂದಿನಿಂದ ಎಲ್ಲ ‘ವಿಐಪಿ’ ವಾಹನಗಳ ನೋಂದಣಿ ಸಂಖ್ಯೆಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ. ‘ವಿಐಪಿ’ ಸಂಖ್ಯೆಗಳನ್ನು ಇ-ಹರಾಜು ಮೂಲಕ ಹಂಚಲಾಗುತ್ತದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ನನಗೆ ದ್ರೋಹ ಮಾಡಿದೆ: ಚಿರಾಗ್ ಪಾಸ್ವಾನ್
Advertisement
ಈ ಘೋಷಣೆಯ ನಂತರ, ಸಾರ್ವಜನಿಕರು ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಖರೀದಿಸಲು ಇಷ್ಟಪಡುವವರು ರಾಜ್ಯ ಸರ್ಕಾರಿ ವಾಹನಗಳ ವಿಐಪಿ ಸಂಖ್ಯೆ ‘179’ ಖರೀದಿಸಲು ಸಾಧ್ಯವಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
Advertisement
ಇ-ಹರಾಜು ಮೂಲಕ ಸಾರಿಗೆಯೇತರ ವಾಹನಗಳಿಗೆ ‘ವಿಐಪಿ ಸಂಖ್ಯೆ’ ನೋಂದಣಿ ಸಂಖ್ಯೆಗಳ ವ್ಯವಸ್ಥೆಯನ್ನು ಜಾರಿಗೆ ತರಲು ಹರಿಯಾಣ ಮೋಟಾರು ವಾಹನಗಳ(ತಿದ್ದುಪಡಿ) ನಿಯಮಗಳು-2022 ಅನ್ನು ಸಂಪುಟ ಅನುಮೋದಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೇಳಿಕೆಯ ಪ್ರಕಾರ, ಈ 179 ‘ವಿಐಪಿ ಸಂಖ್ಯೆ’ ಗಳನ್ನು ಇ-ಹರಾಜು ಮಾಡುವ ಮೂಲಕ 18 ಕೋಟಿಗಳಷ್ಟು ಆದಾಯವನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಲಿಂಗ ಪಕ್ಷಪಾತ ಇದೆಯೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ