ಚಂಡೀಗಢ: ಪ್ರವಾದಿ ಹಾಗೂ ಇಸ್ಲಾಂ ಧರ್ಮದ ಕುರಿತು 2017ರಲ್ಲಿ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಹರಿಯಾಣದ ಐಟಿ ಸೆಲ್ ಮುಖ್ಯಸ್ಥ ಅರುಣ್ ಯಾದವ್‌ನನ್ನು ಬಿಜೆಪಿ ಪಕ್ಷದಿಂದ ವಜಾ ಮಾಡಿದೆ.
ಇತ್ತೀಚೆಗೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು 4 ವರ್ಷಗಳ ಹಿಂದಿನ ಟ್ವೀಟ್‌ಗೆ ಸಂಬಂಧಿಸಿದಂತೆ ಬಂಧಿಸಿದ ಹಿನ್ನೆಲೆ ಅರುಣ್ ಯಾದವ್ ಬಂಧನಕ್ಕೂ ಸಾಮಾಜಿಕ ಮಾಧ್ಯಮಗಳಲ್ಲಿ ಕರೆಗಳು ಬಂದಿತ್ತು. ಈ ಒತ್ತಡದ ನಡುವೆ ಬಿಜೆಪಿ ಗುರುವಾರ ಸಂಜೆ ಹರಿಯಾಣದ ಐಟಿ ಸೆಲ್ ಮುಖ್ಯಸ್ಥ ಸ್ಥಾನದಿಂದ ಅವರನ್ನು ತೆಗೆದುಹಾಕಿದೆ. ಇದನ್ನೂ ಓದಿ: 51 ರನ್ ಚಚ್ಚಿ 4 ವಿಕೆಟ್ ಕಿತ್ತ ಪಾಂಡ್ಯ – ನಂಬರ್ ಗೇಮ್‍ನಲ್ಲಿ ಸೋತ ಆಂಗ್ಲರು
Advertisement
Advertisement
ಟ್ವಿಟ್ಟರ್‌ನಲ್ಲಿ ಅರುಣ್ ಯಾದವ್‌ನನ್ನು ಬಂಧಿಸಿ ಎಂಬ ಕರೆ ಮೂಲಕ #ArrestArunYadav ಟ್ರೆಂಡಿಂಗ್‌ನಲ್ಲಿದೆ. ಈ ಹ್ಯಾಶ್ ಟ್ಯಾಗ್ ಮೇ ತಿಂಗಳಿನಿಂದ ಹಾಗೂ ಜುಬೇರ್ ಬಂಧನದ ಬಳಿಕ ತೀವ್ರವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಹ್ಯಾಶ್‌ಟ್ಯಾಗ್‌ನಲ್ಲಿ 50,000 ಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ – 10 ಮಂದಿಗೆ ಗಾಯ
Advertisement
ಕಳೆದ ತಿಂಗಳು ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾರನ್ನು ತನ್ನ ಸ್ಥಾನದಿಂದ ಬಿಜೆಪಿ ಕಿತ್ತು ಹಾಕಿತ್ತು. ಬಳಿಕ ವಿವಾದಾತ್ಮಕ ಕಾಮೆಂಟ್ ಹಾಗೂ ಟ್ವೀಟ್ ಮಾಡಿದ್ದ ಮತ್ತೊಬ್ಬ ಕಾರ್ಯಕಾರಿ ನವೀನ್ ಜಿಂದಾಲ್ ಅವರನ್ನು ಬಿಜೆಪಿ ಹೊರ ಹಾಕಿತ್ತು.