ನವದೆಹಲಿ: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ (Savitri Jindal) ಅವರು ಹರಿಯಾಣ (Haryana Election Results) ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ.
ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾವಿತ್ರಿ ಅವರು ಬಿಜೆಪಿಯ ಕಮಲ್ ಗುಪ್ತಾ ವಿರುದ್ಧ 18,941 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ರಾಮ್ ನಿವಾಸ್ ರಾರಾ ಸ್ಪರ್ಧಿಸಿದ್ದರು. ಇದನ್ನೂ ಓದಿ: ಹರಿಯಾಣ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್
Advertisement
आभार हिसार परिवार 🙏 pic.twitter.com/92mr7GtDxJ
— Savitri Jindal (@SavitriJindal) October 8, 2024
Advertisement
ಹಿಸಾರ್‌ನ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿರುವ ಸಾವಿತ್ರಿ ಜಿಂದಾಲ್ ಅವರು, ಹಿಸಾರ್ ಕುಟುಂಬಕ್ಕೆ ಕೃತಜ್ಞತೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಿಂದಾಲ್ ಕುಟುಂಬದ 74 ವರ್ಷದ ಸಾವಿತ್ರಿ ಅವರು ಈಗ ಮೂರನೇ ಬಾರಿಗೆ ಹಿಸಾರ್‌ನಲ್ಲಿ ಗೆದ್ದಿದ್ದಾರೆ. ಈ ಹಿಂದೆ 2005 ಮತ್ತು 2009 ರಲ್ಲಿ ಕಾಂಗ್ರೆಸ್ ಶಾಸಕರಾಗಿ ಗೆದ್ದಿದ್ದರು.
Advertisement
ಸಾವಿತ್ರಿ ಜಿಂದಾಲ್ ಅವರು 2005 ರಲ್ಲಿ ತಮ್ಮ ಪತಿ ಒ.ಪಿ.ಜಿಂದಾಲ್ ಅವರ ಮರಣದ ನಂತರ ವ್ಯಾಪಾರ ಮತ್ತು ರಾಜಕೀಯ ಜಗತ್ತಿಗೆ ಕಾಲಿಟ್ಟರು. ಜಿಂದಾಲ್ ಗ್ರೂಪ್‌ನ ಮುಖ್ಯಸ್ಥರಾಗಿ ಅವರು ಉಕ್ಕು, ವಿದ್ಯುತ್, ಗಣಿಗಾರಿಕೆ ಮತ್ತು ಮೂಲಸೌಕರ್ಯದಲ್ಲಿ ತೊಡಗಿರುವ ಸಂಘಟಿತ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ನಾಯಕತ್ವವು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಸೇರಿದಂತೆ ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದೆ. ಇದನ್ನೂ ಓದಿ: Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ
Advertisement
ಸಾವಿತ್ರಿ ಜಿಂದಾಲ್ 2005 ರಲ್ಲಿ ಮೊದಲ ಬಾರಿಗೆ ಹರಿಯಾಣ ಅಸೆಂಬ್ಲಿಯಲ್ಲಿ ಹಿಸಾರ್ ಅನ್ನು ಕಾಂಗ್ರೆಸ್ ಸದಸ್ಯೆಯಾಗಿ ಪ್ರತಿನಿಧಿಸಿದ್ದರು. 2009 ರಲ್ಲಿ ಎರಡನೇ ಬಾರಿಗೆ ಗೆದ್ದಿದ್ದರು. 2013 ರಲ್ಲಿ ಹರಿಯಾಣ ಸರ್ಕಾರದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ ಅವರು ಅಂತಿಮವಾಗಿ ಮಾರ್ಚ್‌ನಲ್ಲಿ ಕಾಂಗ್ರೆಸ್‌ನಿಂದ ಹೊರನಡೆದಿದ್ದರು.
ಸಾವಿತ್ರಿ ಜಿಂದಾಲ್ ಅವರ ವೈಯಕ್ತಿಕ ಸಂಪತ್ತು 3.65 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಹೀಗಾಗಿ ಅವರು ಭಾರತದ ಶ್ರೀಮಂತ ಮಹಿಳೆಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (ಸೆಪ್ಟೆಂಬರ್ 28, 2024) ಪ್ರಕಾರ ಅವರು ದೇಶದ ಐದನೇ-ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಹೊಂದಿದ್ದಾರೆ. ವರದಿ ಪ್ರಕಾರ, ನಿವ್ವಳ ಮೌಲ್ಯ 36.3 ಬಿಲಿಯನ್ ಡಾಲರ್. ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ – ಖಾತೆ ತೆರೆದ ಎಎಪಿ; ಬಿಜೆಪಿ ಅಭ್ಯರ್ಥಿ ವಿರುದ್ಧ ಮಲಿಕ್ ಜಯಭೇರಿ