ಚಂಡೀಗಢ: ಅಗ್ನಿಪಥ್ ಯೋಜನೆಗೆ (Agnipath Scheme) ಸಂಬಂಧಿಸಿದಂತೆ ಹರಿಯಾಣ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಬಿಜೆಪಿ ನೇತೃತ್ವದ ಸರ್ಕಾರವು ಅಗ್ನಿಪಥ್ ಯೋಜನೆಯ ಮೂಲಕ ಸೇನೆಗೆ ನೇಮಕಗೊಂಡಿರುವ ಪೊಲೀಸ್, ಫಾರೆಸ್ಟ್ ಗಾರ್ಡ್, ಮೈನಿಂಗ್ ವಾರ್ಡ್, ಜೈಲ್ ವಾರ್ಡನ್ ಸೇರಿ ವಿವಿಧ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಶೇ.10 ರಷ್ಟು ಮೀಸಲಾತಿ (Reservation For Agniveers) ಘೋಷಿಸಿದೆ.
ಹರಿಯಾಣ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಹೊತ್ತಿನಲ್ಲೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ನೇಮಕಾತಿ ವೇಳೆ ಅಗ್ನಿವೀರರಿಗೆ ವಯೋಮಿತಿ ಸಡಿಲಿಕೆ ಸೇರಿ ಹಲವು ರಿಯಾಯ್ತಿಗಳನ್ನು ನೀಡುವುದಾಗಿಯೂ ಸಿಎಂ ನಯಾಬ್ ಸಿಂಗ್ ಸೈನಿ (Nayab Singh Saini) ಪ್ರಕಟಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಮೀಸಲಾತಿ ವಿಚಾರ – ಸಾಧಕ ಬಾದಕ ನೋಡಿ ತೀರ್ಮಾನ ಮಾಡುತ್ತೇವೆ: ಪ್ರಿಯಾಂಕ್ ಖರ್ಗೆ
- Advertisement -
- Advertisement -
ಗ್ರೂಪ್ ಸಿ ಹುದ್ದೆಗಳ ನೇಮಕಾತಿಯಲ್ಲಿ ಶೇ.5ರ ಷ್ಟು ಮೀಸಲಾತಿ ನೀಡೋದಾಗಿ ಘೋಷಿಸಿದ್ದಾರೆ. ಜೊತೆಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ. ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ ಸಿಎಂ ಸೈನಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಮೀಸಲಾತಿ ನೀಡುವ ಮೂಲಕ ಸರ್ಕಾರ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯುತ್ತಿದೆ: ಡಿಕೆಶಿ
- Advertisement -
- Advertisement -
2022ರಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಯೋಜನೆಯಡಿಯಲ್ಲಿ, 4 ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ 25% ಮಂದಿಗೆ ಮಾತ್ರ ಹೆಚ್ಚುವರಿ 15 ವರ್ಷಗಳವರೆಗೆ ಮುಂದುವರಿಯಲು ಅನುಮತಿಸಲಾಗಿದೆ. ಇದನ್ನೂ ಓದಿ: Valmiki Corporation Scam | ನಿಗಮದ ಹಣವನ್ನ ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಿದ್ದಾರೆ – ಇಡಿ ಸ್ಫೋಟಕ ಹೇಳಿಕೆ!
ಆಡಳಿತ ಎನ್‌ಡಿಎ ಪಕ್ಷದ ಭಾಗವಾಗಿರುವ ಜೆಡಿಯು ಸೇರಿದಂತೆ ಬಿಜೆಪಿಯ ಮಿತ್ರಪಕ್ಷಗಳು ಯೋಜನೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿವೆ. ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಸಹ ಕೇಂದ್ರೀಯ ಪಡೆಗಳ ನೇಮಕಾತಿಗಳಲ್ಲಿ ಶೇ.10ರಷ್ಟು ಮೀಸಲಾತಿ ಪ್ರಕಟಿಸಿತ್ತು.