ಕಾಂಗ್ರೆಸ್‍ನಲ್ಲಿ ಕೆಲ ನಾಯಕರಿಗೆ ಮಾತ್ರ ನಿಯಮ ಇದು ಯಾವ ನ್ಯಾಯ: ಸಿಡಿದೆದ್ದ ಶಾಸಕ ಕುಲದೀಪ್ ಬಿಷ್ಣೋಯಿ

Public TV
1 Min Read
Kuldeep Bishnoi

ಚಂಡೀಗಢ: ಕಾಂಗ್ರೆಸ್ ಪಕ್ಷದಲ್ಲಿ ಕೆಲವು ನಾಯಕರಿಗೆ ಮಾತ್ರ ನಿಯಮಗಳು ಅನ್ವಯವಾಗುತ್ತವೆ. ಇತರರಿಗೆ ವಿನಾಯಿತಿ ಇದೆ ಇದು ಯಾವ ನ್ಯಾಯ ಎಂದು ಹರಿಯಾಣದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಶಾಸಕ ಕುಲದೀಪ್ ಬಿಷ್ಣೋಯಿ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ಉಚ್ಚಾಟನೆ ಗೊಳಿಸಿದ ಬಳಿಕ ಸಿಡಿದೆದ್ದಿದ್ದಾರೆ.

congress

ರಾಜ್ಯಸಭೆ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಅದಮ್‍ಪುರ್ ಕ್ಷೇತ್ರದ ಶಾಸಕರಾಗಿರುವ ಕುಲದೀಪ್, ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರಿಗೆ ಅಡ್ಡ ಮತದಾನ ಮಾಡಿದ್ದರು. ಆ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಶಾಸಕ ಕುಲದೀಪ್ ಬಿಷ್ಣೋಯಿ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರ ಸ್ಥಾನ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಂದ ಉಚ್ಚಾಟನೆ ಮಾಡಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಯಶ್ ಮುಂದಿನ ಸಿನಿಮಾಗೆ ಕರಾವಳಿ ಸುಂದರಿ ಜೋಡಿ

ಈ ಬಗ್ಗೆ ಟ್ವಿಟ್ಟರ್ ಮೂಲಕ ತೀರುಗೇಟು ನೀಡಿರುವ ಕುಲದೀಪ್ ಬಿಷ್ಣೋಯಿ, ನಾನು ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿದ್ದೇನೆ. ಪಕ್ಷದಲ್ಲಿ ಕೆಲವರಿಗೆ ಮಾತ್ರ ನಿಯಮ ಇದೆ. ಈ ಹಿಂದೆಯೂ ಇಂತಹ ಘಟನೆಗಳನ್ನು ನಾನು ನೋಡಿದ್ದೇನೆ. ನಾನು ನೈತಿಕತೆಗೆ ಸರಿಯಾಗಿ ನಡೆದುಕೊಂಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಯೋಗದಲ್ಲೂ ರಾಜಕಾರಣ – ಪ್ರತಾಪ್ ಸಿಂಹ, ಎಸ್.ಎ.ರಾಮದಾಸ್ ನಡುವೆ ಜಟಾಪಟಿ

 ಈ ಹಿಂದೆ ಪಕ್ಷದ ಎಲ್ಲ ಸಭೆಗಳಿಂದ ಬಿಷ್ಣೋಯಿ ದೂರವಿದ್ದರು. ಹರಿಯಾಣದ ರಾಜ್ಯಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳ ಪೈಕಿ ಬಿಜೆಪಿಯ ಕೃಷ್ಣಲಾಲ್ ಪನ್ವರ್, ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಜಯ ಗಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *