ಚಂಡೀಗಢ: ಆಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಗೆ ವಿಷವುಣಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಹರಿಯಾಣ ರಾಜ್ಯದ ಪತೇಹಬಾದ್ ಜಿಲ್ಲೆಯಲ್ಲಿ ನಡೆದಿದೆ.
10ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ತನ್ನ ಪೋಷಕರೊಂದಿಗೆ ಬಟ್ಟು ಕಾಳನ್ ಬ್ಲಾಕ್‍ನ ಮನೆಯಲ್ಲಿ ವಾಸವಾಗಿದ್ದಳು. ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೂವರು ಯುವಕರು ಆಕೆಯನ್ನು ಮನೆಯಿಂದಲೇ ಅಪಹರಿಸಿದ್ದಾರೆ. ನಂತರ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಬಾಲಕಿಗೆ ವಿಷವುಣಿಸಿದ್ದಾರೆ. ಸಂಜೆ ವೇಳೆ ಆಕೆಯನ್ನು ಮನೆಯ ಹತ್ತಿರ ಬಿಟ್ಟು, ಪೋಷಕರಿಗೆ ಬಾಲಕಿಯು ಹುಷಾರಿಲ್ಲದ ಕಾರಣ ಔಷಧಿಯನ್ನು ಕೊಡಿಸಿದ್ದೇವೆಂದು ತಿಳಿಸಿ ಹೋಗಿದ್ದಾರೆ.
Advertisement
Advertisement
Advertisement
ಬಾಲಕಿಯ ಆರೋಗ್ಯ ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವಿಷ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಈ ವೇಳೆ ಬಾಲಕಿಯು ನಡೆದ ಘಟನೆಯನ್ನು ವಿವರಿಸಿದ್ದಾಳೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.
Advertisement
ಈ ಕುರಿತು ಪೋಷಕರು ಮೂವರ ವಿರುದ್ಧ ದೂರನ್ನು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಒಬ್ಬ ಅಪ್ರಾಪ್ತ ಬಾಲಕ ಆರೋಪಿಯು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಆರೋಪಿಯು ಪ್ರಾಣಪಾಯದಿಂದ ಪಾರಾಗಿದ್ದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಕುರಿತು ಬುಧವಾರ ಮಾತನಾಡಿದ ಡಿಸಿಪಿ ಗುದ್ರ್ಯಾಲ್ ಸಿಂಗ್‍ರವರು, ಮೂವರು ಆರೋಪಿಗಳು ಸ್ಥಳೀಯ ನಿವಾಸಿಗಳಾಗಿದ್ದು, ಆರೋಪಿಗಳ ಗುರುತು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಮೂವರ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಕೊಲೆ ಆರೋಪ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದೇವೆ. ಶೀಘ್ರವೇ ಉಳಿದ ಆರೋಪಿಗಳನ್ನು ಬಂಧಿಸುವುದಾಗಿ ಮಾಹಿತಿ ನೀಡಿದ್ದಾರೆ.