Connect with us

ಕಾಂಗ್ರೆಸ್ ಸೈಕಲ್ ಜಾಥಾದಲ್ಲಿ ಅಂಬುಲೆನ್ಸ್ ಸಿಲುಕಿ ನವಜಾತ ಶಿಶು ಬಲಿ!

ಕಾಂಗ್ರೆಸ್ ಸೈಕಲ್ ಜಾಥಾದಲ್ಲಿ ಅಂಬುಲೆನ್ಸ್ ಸಿಲುಕಿ ನವಜಾತ ಶಿಶು ಬಲಿ!

ಚಂಡೀಗಢ: ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಅಂಬುಲೆನ್ಸ್ ಸಿಲುಕಿ, ನವಜಾತ ಶಿಶುವೊಂದು ಮೃತಪಟ್ಟ ಘಟನೆ ಹರಿಯಾಣದಲ್ಲಿ ನಡೆದಿದೆ.

ಬುಧವಾರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಶೋಕ್ ತನ್ವಾರ್ ನೇತೃತ್ವದಲ್ಲಿ ‘ಹರಿಯಾಣ ಬಜಾವೋ ಪರಿವರ್ತನ್ ಲಾವೋ’ ಅಭಿಯಾನ ಉದ್ದೇಶದಿಂದ ಸೈಕಲ್ ಜಾಥಾ ನಡೆಸಲಾಗಿತ್ತು. ಈ ಜಾಥಾದಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇತ್ತ ಎರಡು ದಿನಗಳ ಹಿಂದಷ್ಟೇ ಜನಿಸಿದ್ದ ನವಜಾತ ಶಿಶುವಿನ ಪರಿಸ್ಥಿತಿ ಗಂಭೀರವಾಗಿದ್ದ ಪರಿಣಾಮ ತಾಯಿ ಹಾಗೂ ಸಂಬಂಧಿಕರು ಅಂಬುಲೆನ್ಸ್ ನಲ್ಲಿ ಸೋನಿಪತ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿಯ ಮಧ್ಯದಲ್ಲಿ ಸೈಕಲ್ ಜಾಥಾ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ-1ನ್ನು ತಡೆಯಲಾಗಿತ್ತು. ಹೀಗಾಗಿ ಅಲ್ಲಿಯೇ ಆಂಬುಲೆನ್ಸ್ 30 ನಿಮಿಷ ಸಿಲುಕಿತ್ತು. ಬಳಿಕ ಆಸ್ಪತ್ರೆ ತಲುಪುತ್ತಿದ್ದಂತೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸುತ್ತಿದ್ದಂತೆ ತಾಯಿ ಅಸ್ವಸ್ಥಗೊಂಡು ಬಿದ್ದಿದ್ದಾರೆ. ಕೋಮಾಗೆ ಜಾರಿದ ತಾಯಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ.

ಅಶೋಕ್ ಪ್ರತಿಕ್ರಿಯೆ ಏನು?
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಅಶೋಕ್ ತನ್ವಾರ್, ಶಿಶು ಮೃತಪಟ್ಟ ಸುದ್ದಿ ಕೇಳಿ ದುಃಖವಾಗಿದೆ. ನಾವೇನು ಇದನ್ನು ರಾಜಕೀಯಕ್ಕಾಗಿ ಮಾಡಿಲ್ಲ. ಒಂದು ವೇಳೆ ನಮ್ಮ ವಿರುದ್ಧ ಪ್ರಕರಣ ದಾಖಲು ಮಾಡಿದರೆ, ಇದರಲ್ಲಿ ಆಸ್ಪತ್ರೆಯ ನಿಷ್ಕಾಳಜಿಯೂ ಎದ್ದು ಕಾಣುತ್ತದೆ ಎಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Advertisement
Advertisement