ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ತಮ್ಮ ಮೈ ಮೇಲೆ ಸುಂದರವಾದ ಚಿಟ್ಟೆಯ ಚಿತ್ತಾರವನ್ನು ಬಿಡಿಸಿಕೊಂಡಿದ್ದಾರೆ. ಚಿಟ್ಟೆ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕಾಗಿ ಪಾತರಗಿತ್ತಿಯ ಚಿತ್ರದ ಟ್ಯಾಟೋ ಹಾಕಿಸಿಕೊಂಡಿದ್ದಾರೆ.
ಹೊಸದಾಗಿ ಮದುವೆಯಾದ ನವಜೋಡಿ ತಮ್ಮ ಹನಿಮೂನ್ ಬಳಿಕ ಹೊಸ ಜೀವನ ಕಟ್ಟಿಕೊಳ್ಳುವ ಸುಂದರ ಕಥೆಯನ್ನು ಸಿನಿಮಾ ಹೊಂದಿದೆ. `ರಂಗಪ್ಪ ಹೋಗಿ ಬಿಟ್ನಾ’ ಸಿನಿಮಾ ನಿರ್ದೇಶನ ಮಾಡಿದ್ದ ಎಂ.ಎಲ್.ಪ್ರಸನ್ನ ಚಿಟ್ಟೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
Advertisement
Advertisement
ಚಿತ್ರಕ್ಕಾಗಿ ಹರ್ಷಿಕಾ ಮೈ ಮೇಲೆ ವಸ್ತ್ರ ವಿನ್ಯಾಸಕಿ ಚಂದನಾ ಆರಾಧ್ಯ ಅವರು ಚಿತ್ರ ಬಿಡಿಸಿದ್ದಾರೆ. ಹರ್ಷಿಕಾ ಮೈ ಮೇಲೆ ಚಿಟ್ಟೆ ಚಿತ್ರ ಬಿಡಿಸುವಾಗ ಚಂದನಾ ನರ್ವಸ್ ಆಗಿದ್ದರೂ ಸತತ 4 ಗಂಟೆಗಳ ಪರಿಶ್ರಮದಲ್ಲಿ ಸುಂದರ ಚಿಟ್ಟೆಯನ್ನು ಸೃಷ್ಟಿಸಿದ್ದಾರೆ. ಸುಮಾರು 12 ಗಂಟೆಗಳ ಕಾಲ ಹರ್ಷಿಕಾ ಅವರ ಮೈ ಮೇಲೆ ಚಿಟ್ಟೆಯ ಚಿತ್ರವಿತ್ತು.
Advertisement
ಮೈ ಮೇಲೆ ಚಿಟ್ಟೆ ಹಾಕಿಸಿಕೊಂಡಾಗ ನನ್ನ ಹೈಸ್ಕೂಲ್ ದಿನಗಳು ನೆನಪಿಗೆ ಬಂದವು. ಚಿಟ್ಟೆಯಲ್ಲಿ ನಾನು ನಟಿಸುತ್ತಿರುವುದು ಸಾಕಷ್ಟು ಖುಷಿಯನ್ನು ಕೊಟ್ಟಿದೆ. ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕೆಂದು ಹಲವು ದಿನಗಳ ಕಾಯುತ್ತಿದ್ದೇವೆ. ಆ ವೇಳೆ ನನಗೆ ದೊರೆತಿದ್ದು `ಚಿಟ್ಟೆ’ ಸಿನಿಮಾ ಎಂದು ಹರ್ಷಿಕಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
Advertisement
ಚಿತ್ರದಲ್ಲಿ ನಾಯಕ ನಟನಾಗಿ ಯಶಸ್ ಸೂರ್ಯ ನಟಿಸಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣವಿದ್ದು, ಪ್ರಸನ್ನ ಮತ್ತು ಬಿ.ಶ್ರೀನಿವಾಸ ಚಿಟ್ಟೆಗೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳ ಚಿತ್ರೀಕರಣ ಮುಗಿದಿದೆ. ನಿದೇಶಕ ಪ್ರಸನ್ನ ಅವರ ಸಿನಿಮಾಗೆ ಸಂಗೀತ ನೀಡಿದ್ದಾರೆ.
https://twitter.com/actressharshika/status/925281087449735170