ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ- ಭುವನ್ (Bhuvan) ಆಗಸ್ಟ್ 24ರಂದು ಹಸೆಮಣೆ (Wedding) ಏರಿದ್ದರು. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿ ಈಗ ಅಮೆರಿಕಾಗೆ ಹಾರಿದ್ದಾರೆ. ಮಸ್ತ್ ಆಗಿ ಸೆಲೆಬ್ರೇಶನ್ ಮಾಡ್ತಿದ್ದಾರೆ. ಈ ಕುರಿತು ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ(Harshika Poonacha)- ಭುವನ್ ಕೊಡವ (Kodava) ಪದ್ಧತಿಯಂತೆ ಮದುವೆಯಾಗಿ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಭುವನ್ ಹೊಸ ಮನೆ ಗೃಹಪ್ರವೇಶ, ಮದುವೆ ಅಂತಾ ಬ್ಯುಸಿಯಿದ್ದರು. ಮದುವೆಯ ಬಳಿಕ ಹೊಸ ಜೋಡಿ ಯುಎಸ್‌ಗೆ ಹಾರಿದ್ದಾರೆ. ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನ ಅಮೆರಿಕಾದಲ್ಲಿ ಕಳೆಯುತ್ತಿದ್ದಾರೆ. ಆಪ್ತರೊಬ್ಬರ ಆರತಕ್ಷತೆ ಸಮಾರಂಭಕ್ಕಾಗಿ ಈ ಜೋಡಿ ಅಮೆರಿಕಾಗೆ ತೆರಳಿದ್ದಾರೆ. ಈ ಬಗ್ಗೆ ನಟಿ ಪೋಸ್ಟ್ ಮಾಡಿದ್ದಾರೆ.

ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.
ಯಾಕೆ ವರ್ಷಗಳು ಎಲ್ಲೂ ನಮ್ಮ ಪ್ರೀತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ. ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.
ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ ಎಂದು ಇತ್ತೀಚಿಹೆ ಈ ನವಜೋಡಿ ಲವ್, ಮದುವೆ ಬಗ್ಗೆ ಬಾಯ್ಬಿಟ್ಟಿದ್ದರು.




