ದುಬೈ: 14ನೇ ಆವೃತ್ತಿಯ ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ನೂತನ ದಾಖಲೆಯೊಂದನ್ನು ಮಾಡಿದ್ದಾರೆ.
Advertisement
14ನೇ ಆವೃತ್ತಿಯ ಐಪಿಎಲ್‍ನಲ್ಲಿ ಹರ್ಷಲ್ ಪಟೇಲ್ ಪ್ರತಿ ಪಂದ್ಯದಲ್ಲೂ ಕೂಡ ಉತ್ತಮವಾದ ದಾಳಿ ಸಂಘಟಿಸಿ ವಿಕೆಟ್ ಬೇಟೆಯಾಡುತ್ತಿದ್ದು, ಈ ಮೂಲಕ ಆರ್‌ಸಿಬಿ ಪಾಳಯದಲ್ಲಿ ಹರ್ಷ ತಂದಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಒಂದು ಬಾರಿ ಹ್ಯಾಟ್ರಿಕ್ ಸಹಿತ 11 ಪಂದ್ಯದಲ್ಲಿ 26 ವಿಕೆಟ್ ಪಡೆದು ಸೀಸನ್ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಅನ್ಕ್ಯಾಪ್ಡ್ ಪ್ಲೇಯರ್( 3 ಮಾದರಿಯ ಕ್ರಿಕೆಟ್‍ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರ) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?
Advertisement
Advertisement
ಈ ಹಿಂದೆ 2015ರಲ್ಲಿ ತಮ್ಮದೆ ತಂಡದ ಆಟಗಾರ ಯಜುವೇಂದ್ರ ಚಹಲ್ ಸೀಸನ್ ಒಂದರಲ್ಲಿ 25 ವಿಕೆಟ್ ಕಿತ್ತು ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಹರ್ಷಲ್ ಪಟೇಲ್ ಮುರಿದಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಯುವ ಆಟಗಾರರ ದರ್ಬಾರ್
Advertisement
ಐಪಿಎಲ್‍ನಲ್ಲಿ ಸೀಸನ್ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ಸಿಎಸ್‍ಕೆ ತಂಡದ ಆಟಗಾರ ಡ್ವೇನ್ ಬ್ರಾವೋ ಹೆಸರಲ್ಲಿದೆ. ಬ್ರಾವೋ 2013ರ ಐಪಿಎಲ್‍ನಲ್ಲಿ 32 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿಯಲು ಪಟೇಲ್‍ಗೆ ಇನ್ನು 6 ವಿಕೆಟ್‍ಗಳ ಅವಶ್ಯಕತೆ ಇದೆ. ಈ ರೀತಿ ವಿಕೆಟ್ ಬೇಟೆಯಾಡುತ್ತ ಹೋದರೆ ಹರ್ಷಲ್ ಪಟೇಲ್ ಈ ದಾಖಲೆ ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.