ಶಿವಮೊಗ್ಗ: ಹರ್ಷ ಹಾಗೂ ಖಾಸಿಫ್ ನಡುವೆ ಈ ಹಿಂದೆಯೂ ಹಲವು ಬಾರಿ ತಿಕ್ಕಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ 2016 ಮತ್ತು 2017ರಿಂದಲೇ ಕಣ್ಣಿಟ್ಟಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಧಾರ್ಮಿಕ ಭಾವನೆಗೆ ಧಕ್ಕೆ ತಂದು ಕೋಮು ಸೌಹಾರ್ದವನ್ನು ಹಾಳು ಮಾಡಲಾಗುತ್ತಿದೆ ಎಂಬ ಕೇಸ್ ಆದಾಗಿಂದ ಹರ್ಷ ವಿರುದ್ಧ ಖಾಸಿಫ್ ದ್ವೇಷ ಸಾಧಿಸುತ್ತಿದ್ದರು. ಆಗ ಹರ್ಷ ವಿರುದ್ಧ ಎರಡು ಕೇಸ್‍ಗಳನ್ನು ಸಹ ಪೊಲೀಸರು ಹಾಕಿದ್ದರು. ಈ ನಡುವೆ 2020ರಲ್ಲಿ ಜೈಲಿನಲ್ಲಿ ಒಮ್ಮೆ ಹರ್ಷ ಮತ್ತು ಖಾಸಿಫ್ ಗಲಾಟೆ ಮಾಡಿಕೊಂಡಿದ್ದರು. ಆನಂತರ ಕೆಲ ತಿಂಗಳ ಹಿಂದೆ ಕೋರ್ಟ್ ಬಳಿ ಹಾಗೂ ಹೋಟೆಲ್ ಮುಂದೆ ಗಲಾಟೆ ಮಾಡಿಕೊಂಡಿದ್ದರು.
Advertisement
Advertisement
ಬಳಿಕ ಹರ್ಷನನ್ನು ಹೊಡೆಯಬೇಕು ಎಂದು ಖಾಸಿಫ್ ತೀರ್ಮಾನ ಮಾಡಿದ್ದ. ಆದರೆ ಯಾವತ್ತು ಹೊಡೆಯಬೇಕು ಎಂಬುದು ತೀರ್ಮಾನ ಆಗಿರಲಿಲ್ಲ. ಖಾಸಿಫ್ ಮತ್ತು ಆತನ ಸಹಚರರಿಗೆ ಹರ್ಷ ಚಲನವಲನದ ಬಗ್ಗೆ ನಿಗಾ ಇಡುವಂತೆ ತಿಳಿಸಿದ್ದ. ಕಳೆದ ಎರಡು ತಿಂಗಳಿಂದ ಹರ್ಷನನ್ನು ಆರೋಪಿಗಳು ಗಮನಿಸುತ್ತಿದ್ದರು. ಹರ್ಷ ಎಲ್ಲಿ ಹೋಗ್ತಾನೆ, ಎಲ್ಲಿ ಬರ್ತಾನೆ ಯಾವಾಗ ಒಂಟಿ ಆಗಿರುತ್ತಾನೆ ಎನ್ನುವ ಮಾಹಿತಿಯನ್ನು ಕಲೆ ಹಾಕಿದ್ದರು. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
Advertisement
Advertisement
ಹಿಜಬ್ ಗಲಾಟೆ ನಂತರ ಹರ್ಷನ ಮೇಲೆ ಮತ್ತಷ್ಟು ದ್ವೇಷ ಕಟ್ಟಿಕೊಂಡಿದ್ದ ಇವರು, ಕೃತ್ಯ ನಡೆದ ದಿನ ಹರ್ಷ ಒಬ್ಬನೇ ಇರುವುದು ಆರೋಪಿಗಳ ಕಣ್ಣಿಗೆ ಬಿದ್ದಿತ್ತು. ಯಾವಾಗಾದರೂ ಹೊಡೆಯಬೇಕು ಎಂದು ತೀರ್ಮಾನ ಮಾಡಿದ್ದ ಆರೋಪಿಗಳಿಗೆ ಹರ್ಷ ಒಂಟಿಯಾಗಿ ಸಿಕ್ಕಿ ಹಾಕೊಂಡಿದ್ದ. ಯಾವಾಗಲೂ ಚಾಕು ಡ್ಯಾಗರ್‍ಗಳನ್ನು ತಮ್ಮ ವಾಹನದಲ್ಲಿ ಇಡುತಿದ್ದ ಆರೋಪಿಗಳು, ಹರ್ಷ ಸಿಕ್ಕಾಗ ಇವನದು ಜಾಸ್ತಿ ಆಗಿದೆ ಮುಗಿಸಿ ಬಿಡುವ ಎಂದು ಅಟ್ಯಾಕ್ ಮಾಡಿದ್ದಾರೆ. ಅಟ್ಯಾಕ್ ಮಾಡಿದವರ ಪೈಕಿ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ