ಶಿವಮೊಗ್ಗ: ಹರ್ಷನ ಕೊಲೆಗೆ ಹಂತಕರೇ ಸ್ವತಃ ಕುಲುಮೆಯಲ್ಲಿ ಕುಳಿತುಕೊಂಡು ಕುಲುಮೆಯವನಿಗೆ ಸೂಚನೆ ನೀಡಿ ಮಚ್ಚು ರೆಡಿ ಮಾಡಿಸಿದ್ದರು. ಹರ್ಷ ಕೊಲೆಗೆ ಮೊದಲೇ ಪ್ಲಾನ್ ಮಾಡಿದ್ರಾ ಎಂಬ ಶಂಕೆ ಬರುತ್ತಿದೆ.
ಹರ್ಷ ಕೊಲೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದು, ಒಂದೊಂದೇ ಸತ್ಯ ತೆರೆದುಕೊಳ್ಳುತ್ತಿದೆ. ಈ ನಡುವೆ ಹರ್ಷನ ಕೊಲೆಗೆ ಸ್ವತಃ ಹಂತಕರೇ ಕುಲುಮೆಯಲ್ಲಿ ಕುಳಿತುಕೊಂಡು ಕುಲುಮೆಯವನಿಗೆ ನಿರ್ದೇಶನ ನೀಡಿ ಮಚ್ಚು ತಯಾರಿ ಮಾಡಿಸಿದ್ದರು. ಈ ಹಂತಕರು ಹರ್ಷನ ಕೊಲೆಗೆ 3 ಮಚ್ಚುಗಳನ್ನು ರೆಡಿ ಮಾಡಿಸಿದ್ದರು. ಭಾನುವಾರ ಮುಂಜಾನೆಯೇ ಭದ್ರಾವತಿಯ ಕುಲುಮೆಯೊಂದರಲ್ಲಿ ಸ್ವತಃ ನಾಲ್ವರು ಹಂತಕರು ಕುಳಿತುಕೊಂಡು ಇದನ್ನು ರೆಡಿ ಮಾಡಿಸಿದ್ದಾರೆ. ಇದನ್ನೂ ಓದಿ: ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?
ಹಂತಕರು ಮಚ್ಚುಗಳು ಹೀಗೆಯೇ ಇರಬೇಕು. ಇಷ್ಟೇ ಉದ್ದ ಇರಬೇಕು. ಇಷ್ಟೇ ಹರಿತವಾಗಿ ಇರಬೇಕು ಎಂದು ಹೇಳಿ ಮಾಡಿಸಿದ್ದಾರೆ. ಮೂರು ಮಚ್ಚುಗಳನ್ನು ತಯಾರಿಸಲು 1,200 ರೂ. ಹಣ ಖರ್ಚು ಮಾಡಿದ್ದಾರೆ. ಹರ್ಷನ ಕೊಲೆ ಮಾಡಲು ಈ ಮೊದಲೇ ನಿರ್ಧರಿಸಿದ್ದರಿಂದ ಭಾನುವಾರ ಮುಂಜಾನೆ ಮಚ್ಚು ರೆಡಿ ಮಾಡಿಸಿದ್ದರು. ಭಾನುವಾರ ರಾತ್ರಿ ಹರ್ಷನನ್ನು ಕೊಲೆ ಮಾಡಲಾಗಿದೆ.
ಹಂತಕರು ಭಾನುವಾರ ಸಂಜೆ ಕಾರಿನಲ್ಲಿ ಕುಳಿತುಕೊಂಡು ಹರ್ಷನ ಚಲನವಲನ ಗಮನಿಸಿದ್ದಾರೆ. ಹರ್ಷ ಸೀಗೆಹಟ್ಟಿ ಬಡಾವಣೆಯಲ್ಲಿ ನಡೆದುಕೊಂಡು ಬರುತ್ತಿರುವಾಗ, ಹಂತಕರು ಅವನನ್ನು ಕಾರಿನಲ್ಲಿ ಕುಳಿತು ಗಮನಿಸಿದ್ದಾರೆ. ನಂತರ ಸೀಗೆಹಟ್ಟಿಯ ಹಲವೆಡೆ ಕಾರಿನಲ್ಲಿ ಓಡಾಟ ನಡೆಸಿದ್ದ ಹಂತಕರು, ಹರ್ಷನ ಕೊಲೆ ಮಾಡುವ ಮೊದಲು ಒಂದು ಕಾರು ಬಳಕೆ ಮಾಡಿದ್ದಾರೆ. ಹರ್ಷನ ಕೊಲೆ ಮಾಡಿದ ನಂತರ ಎಸ್ಕೇಪ್ ಆಗಲು ಮತ್ತೊಂದು ಕಾರು ಬಳಕೆ ಮಾಡಿದ್ದಾರೆ. ಇದನ್ನೂ ಓದಿ: BJP, RSS ನಾಯಕರ ಮಾಹಿತಿಯನ್ನು SDPIಗೆ ಕೊಟ್ಟ ಪೊಲೀಸ್ ಅಮಾನತು!
ಹರ್ಷ ಒಬ್ಬನೇ ಇರುವುದು ಗಮನಿಸಿದ ಹಂತಕರು, ಸೀಗೆಹಟ್ಟಿ ಬಳಿ ಮಚ್ಚು ಹಿಡಿದುಕೊಂಡು ಕಾರಿನಿಂದ ಕೆಳಗೆ ಇಳಿದಿದ್ದಾರೆ. ಹಂತಕರು ಕಾರಿನಿಂದ ಕೆಳಗೆ ಇಳಿಯುತ್ತಿದ್ದ ಹಾಗೆ ಆ ಸ್ಥಳದಿಂದ ಕಾರು ಹೊರಟು ಹೋಗಿದೆ. ಹರ್ಷನ ಕೊಲೆಯ ನಂತರ ಓಡಿ ಹೋಗಿ ಮತ್ತೊಂದು ಕಾರು ಹತ್ತಿಕೊಂಡು ಪರಾರಿಯಾಗಿದ್ದಾರೆ.