ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್‍ಗಳ ಕಾರ್ಯಾಚರಣೆ

Public TV
2 Min Read
HARSHA

ಶಿವಮೊಗ್ಗ: ಹಿಂದು ಸಂಘಟನೆಯ ಕಾರ್ಯಕರ್ತ ಹರ್ಷ ಹತ್ಯೆ ಸಂಬಂಧ ಬಂಧಿತರ ಸಂಖ್ಯೆ 8ಕ್ಕೆ ಏರಿದೆ. 8ನೇ ಆರೋಪಿ ಫರಾನ್ ಪಾಷಾನನ್ನು ವಶಕ್ಕೆ ಪಡೆಯಲಾಗಿದೆ.

SHIVAMOGGA 5

ಶಿವಮೊಗ್ಗ ನಗರದಲ್ಲಿ ಈಗಾಗಲೇ ಕರ್ಫ್ಯೂ ಜಾರಿಮಾಡಲಾಗಿದ್ದು ಸದ್ಯ ಶಾಂತಿ ನೆಲೆಸಿದ್ದು, ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದೆ. ಆದರೂ, ಶುಕ್ರವಾರ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಮುಮದುವರಿಯಲಿದೆ. ಶಿವಮೊಗ್ಗ ನಗರ ಸೇರಿದಂತೆ ಇಡೀ ಜಿಲ್ಲೆಯ ಮೇಲೆ ಪೊಲೀಸ್ ಹದ್ದಿನಕಣ್ಣು ಇಡಲಾಗಿದೆ. ಹರ್ಷ ಕೊಲೆ ಬೆನ್ನಲ್ಲೇ ಎಚ್ಚೆತ್ತ ಶಿವಮೊಗ್ಗ ಪೊಲೀಸರು ಇವತ್ತು ಹೈವೋಲ್ಟೇಜ್ ಸಭೆ ನಡೆಸಿದ್ರು. ಕರ್ಫ್ಯೂ ಮುಂದುವರಿಸಬೇಕಾ? ಬೇಡ್ವಾ? ಜೊತೆಗೆ ಕಳೆದೆರಡು ದಿನಗಳಲ್ಲಾದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಇದನ್ನೂ ಓದಿ:  ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

DRONE

ಇಂದು ಮಹತ್ವದ ಬದಲಾವಣೆಯೊಂದು ನಡೆದಿದ್ದು, ಶಿವಮೊಗ್ಗ ಕಾನೂನು ಸುವ್ಯವಸ್ಥೆ ಹೊಣೆಯನ್ನು ಮುರುಗನ್ ಬದಲಿಗೆ ರಮಣ್ ಗುಪ್ತಾಗೆ ವಹಿಸಲಾಗಿದೆ. ಸದ್ಯ ಜಿಲ್ಲಾದ್ಯಂತ ಬಿಗಿಭದ್ರತೆ ಒದಗಿಸಲಾಗಿದ್ದು ಡ್ರೋಣ್ ಮೂಲಕ ಕಟ್ಟೆಚ್ಚರ ವಹಿಸಿದೆ. ಒಟ್ಟು 7 ಡ್ರೋಣ್ ಕಾರ್ಯಾಚರಣೆ ನಡೆಸ್ತಿದ್ದು, ಒಂದೊಂದು ಡ್ರೋಣ್ 5 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯನಿರ್ವಸುತ್ತಿದೆ. ಮತ್ತೊಂದ್ಕಡೆ ನಗರದಾದ್ಯಂತ ಡಿಸಿ, ಎಸ್‍ಪಿ ಸಿಟಿ ರೌಂಡ್ಸ್ ನಡೆಸಿದರು.  ಇದನ್ನೂ ಓದಿ: ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

ನಿನ್ನೆ ಖಾಸೀಫ್, ನದೀಮ್, ಆಸೀಫ್ ಖಾನ್, ರಿಯಾನ್ ಶರೀಫ್ ಅಲಿಯಾಸ್ ಖಸಿ, ನಿಹಾನ್ ಅಲಿಯಾಸ್ ಮುಜಾಹಿದ್, ಅಬ್ದುಲ್ ಅಪ್ನಾನ್, ಜಿಲಾನ್ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿತ್ತು. ಇಂದು ಇನ್ನೋರ್ವ ಆರೋಪಿ ಫರಾನ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯವರಾಗಿದ್ದು, ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಸಾಬೀತಾಗಿದೆ. ಇಷ್ಟಾದರೂ ಇವರ ಹೆಡೆಮುರಿ ಕಟ್ಟಿಲ್ಲ ಯಾಕೆ ಅನ್ನೋ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್

ಆರೋಪಿಗಳ ಬಗ್ಗೆ ಹಲವು ಪ್ರಶ್ನೆಗಳು ಕಾಡುತ್ತಿದ್ದಂತೆ, ಕ್ರೈಂ ಆಡಿಟ್‍ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ. ಡಿಜಿಗೆ ಪತ್ರ ಬರೆದಿದ್ದು ಕೋಟೆ, ದೊಡ್ಡಪೇಟೆ ಪೊಲೀಸ್ ಠಾಣೆಗಳಲ್ಲಿ ಕ್ರೈಂ ಆಡಿಟ್‍ಗೆ ಸೂಚಿಸಿದ್ದಾರೆ. ಒಂದು ವಾರದೊಳಗೆ ವರದಿ ನೀಡುವಂತೆ ಆದೇಶಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಇಲ್ಲಿದ್ದ ಅಧಿಕಾರಿಗಳು ಯಾರು? ಆರೋಪಿಗಳ ಮೇಲೆ ಕೇಸ್ ಇದ್ದರೂ ಏನ್ ಕ್ರಮ ಆಗಿದೆ? ಆರೋಪಿಗಳ ವಿರುದ್ಧ ಪೊಲೀಸರು ಹೇಗೆ ಕ್ರಮ ತೆಗೆದುಕೊಂಡಿದ್ದಾರೆ ಅಂತ ತನಿಖೆ ಆಗಲಿದೆ. ಸೆಕ್ಷನ್ 144 ಕೆಲ ದಿನ ಮುಂದುವರಿಸುತ್ತೇವೆ. ಸಂಘಟನೆಗಳ ಕೈವಾಡ ಇರುವ ಬಗ್ಗೆಯೂ ತನಿಖೆ ಆಗುತ್ತೆ ಎಂದು ಆರಗ ಜ್ಞಾನೆಂದ್ರ ಹೇಳಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *