ಬೆಂಗಳೂರು: ಹೋಳಿ ಆಡೋ ವಿಚಾರದಲ್ಲಿ ಗಲಾಟೆ ನಡೆದು, ಬಿಜೆಪಿ ಕಾರ್ಯಕರ್ತನ ಮೇಲೆ ಹ್ಯಾರಿಸ್ ಬೆಂಬಲಿಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆ ವಿವೇಕ್ ನಗರ ಠಾಣೆಯ ರುದ್ರಪ್ಪ ಗಾರ್ಡನ್‍ನಲ್ಲಿ ನಡೆದಿದೆ.
Advertisement
ನಗರದ ರುದ್ರಪ್ಪ ಗಾರ್ಡನ್‍ನಲ್ಲಿ ಭಾನುವಾರ ಹೋಳಿ ಆಚರಣೆ ಮಾಡ್ತಿದ್ರು. ಈ ವೇಳೆ ಕುಟ್ಟಿ ಮತ್ತು ಜೀವನ್ ಎಂಬವರ ನಡುವೆ ಹೋಳಿ ಹಾಕುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಗಲಾಟೆಗೆ ಎಂಟ್ರಿಯಾದ ಮೂವೀಸ್, ಇಬ್ಬರ ಮೇಲೂ ಹಲ್ಲೆ ಮಾಡಿ ಅಲ್ಲಿಂದ ಕಳುಹಿಸಿದ್ದ. ಇದನ್ನು ಪ್ರಶ್ನೆ ಮಾಡಲು ಹೋದ ದಿಲೀಪ್ ಎಂಬವರ ಮೇಲೂ ಮೂವೀಸ್ ಹಲ್ಲೆ ಮಾಡಿದ್ದಾನೆ.
Advertisement
Advertisement
ಮೂವೀಸ್ ಶಾಸಕ ಹ್ಯಾರಿಸ್ ಬಲಗೈ ಬಂಟ ಎನ್ನಲಾಗಿದ್ದು, ಎರಡು ಕಡೆಯವರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವೀಸ್ ಗಾಗಿ ಹುಡುಕಾಟ ನಡೆಸಿದ್ದಾರೆ.