ಲಂಡನ್: ಭಾರತ ಮೂಲದ ಕ್ಯಾಪ್ಟನ್ ಹರ್‌ಪ್ರೀತ್ ಚಂಡಿ ಅವರು ದಕ್ಷಿಣ ಧ್ರುವಕ್ಕೆ ಏಕಾಂಗಿಯಾಗಿ ಪ್ರವಾಸ ಮಾಡುವ ಮೂಲಕ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
32 ವರ್ಷದ ಹರ್‌ಪ್ರೀತ್ ಚಂಡಿ ಅವರು ಬ್ರಿಟನ್ ಸೇನೆಯಲ್ಲಿ ಫಿಜಿಯೋಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಪೋಲಾರ್ ಪ್ರೀತ್ ಎಂದು ಖ್ಯಾತರಾಗಿದ್ದಾರೆ. 40 ದಿನಗಳಲ್ಲಿ 1,127 ಕಿಮೀ ದೂರ ಕ್ರಮಿಸುವ ಮೂಲಕ ಅವರು ಅಂಟಾರ್ಟಿಕಕ್ಕೆ ಕೈಗೊಂಡಿದ್ದ ಸಾಹಸಯಾತ್ರೆ ಪೂರ್ಣಗೊಳಿಸಿದರು.
Advertisement
Advertisement
ಇದರಿಂದಾಗಿ ದಕ್ಷಿಣ ಧ್ರುವಕ್ಕೆ ಏಕಾಂಗಿಯಾಗಿ ಪ್ರವಾಸ ಕೈಗೊಂಡ ಭಾರತ ಮೂಲದ ಮೊದಲ ಮಹಿಳೆ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಜೊತೆಗೆ ಏಕಾಂಗಿಯಾಗಿ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಶ್ವೇತ ವರ್ಣಿಯ ಮಹಿಳೆ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದನ್ನೂ ಓದಿ: ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ
Advertisement
Advertisement
ಮೈನಸ್ 50 ಡಿಗ್ರಿ ಸೆಲ್ಸಿಯಸ್ ತಾಪಮಾನ, ಇನ್ನೊಂದೆಡೆ ಗಂಟೆಗೆ 60 ಮೈಲು ವೇಗದಲ್ಲಿ ಬೀಸುತ್ತಿದ್ದ ಗಾಳಿ. ಇಂತಹ ವಾತಾವರಣದಲ್ಲಿ ಪ್ರವಾಸವನ್ನು ಕೈಗೊಂಡಿದ್ದರು. ಈ ಕುರಿತ ಪ್ರತಿ ಹಂತವನ್ನು ತಮ್ಮ ಬ್ಲಾಗ್‌ನಲ್ಲಿ ವಿವರಿಸಿದ್ದಾರೆ. 3 ವರ್ಷಗಳ ಹಿಂದೆ ಧ್ರುವಿಯ ಲೋಕದ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಈಗ ಇಲ್ಲಿಗೆ ತಲುಪಿದ್ದೇನೆ. ಈ ಭಾವನೆಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!