ಸೋಡಾ ಅಥವಾ ಸೋಡಾ ಮಿಶ್ರಿತ ಪಾನೀಯ ಅಂದರೆ ಹಲವರಿಗೆ ಅಚ್ಚುಮೆಚ್ಚು. ಅದರಲ್ಲೂ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿಗಳಿಗೆ ಬಹುತೇಕ ಮಂದಿ ಸೋಡಾದ ಮೊರೆ ಹೋಗುತ್ತಾರೆ. ಕೇವಲ ಸೋಡಾ ಮಾತ್ರವಲ್ಲದೆ ಕೆಲವು ತಂಪು ಪಾನೀಯಗಳು ಕೂಡ ಕೆಲವರ ದೈನಂದಿನ ಆಹಾರದ ಒಂದು ಭಾಗವಾಗಿಬಿಟ್ಟಿದೆ. ಆದರೆ ಇಷ್ಟವೆಂದು ಈ ಪಾನೀಯಗಳನ್ನು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ.
Advertisement
ಯಾಕೆಂದರೆ ಸೋಡಾದಲ್ಲಿ ಯಾವುದೇ ಪೋಷಕಾಂಶ ಇರುವುದಿಲ್ಲ. ಸೋಡಾ ಸೇವನೆಯಿಂದ ಆರೋಗ್ಯಕ್ಕೆ ಉಪಯೋಗ ಆಗುವುದಕ್ಕಿಂತ ಅಡ್ಡಪರಿಣಾಮವೇ ಹೆಚ್ಚಾಗಿವೆ. ಆರೋಗ್ಯಕ್ಕೆ ಉಪಯುಕ್ತವಾದ ಒಂದು ಅಂಶವು ಸೋಡಾದಲ್ಲಿ ಇಲ್ಲ. ಇದರಲ್ಲಿ ಇರುವಂತಹ ಅನೈಸರ್ಗಿಕ ಅಂಶಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
Advertisement
Advertisement
ಅತೀಯಾಗಿ ಸೋಡಾ ಅಥವಾ ತಂಪು ಪಾನೀಯಗಳನ್ನು ಸೇವಿಸಿದರೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕ್ಯಾಲ್ಸಿಯಂ ಕೊರತೆ, ತೂಕ ಹೆಚ್ಚುವಿಕೆ, ನಿದ್ರಾಹೀನತೆ ಎಂತಹ ಕಾಯಿಲೆಗಳು ಬರುತ್ತದೆ.
Advertisement
ಸೋಡಾ ಸೇವನೆ ಆರೋಗ್ಯಕ್ಕೆ ಎಷ್ಟು ಹಾನಿಕರ?
ನೀರು
ಸೋಡಾದಲ್ಲಿ ಹೆಚ್ಚಾಗಿ ನಲ್ಲಿ ನೀರನ್ನು ಬಳಸಲಾಗುತ್ತದೆ. ಹೀಗಾಗಿ ಇದರಲ್ಲಿ ಕ್ಲೋರಿನ್, ಫ್ಲೋರೈಡ್ ಮತ್ತು ಇತರ ಕೆಲವು ಲೋಹಗಳು ಸೇರಿಕೊಂಡಿರುತ್ತದೆ. ಈ ಲೋಹದ ಅಂಶ ದೇಹ ಸೇರಿದರೆ ಅನಾರೋಗ್ಯಕ್ಕೆ ಬಹುಬೇಗ ತುತ್ತಾಗುತ್ತೇವೆ.
ಸಕ್ಕರೆ
ಒಂದು ಸಣ್ಣ ಕ್ಯಾನ್ ತಂಪು ಪಾನೀಯದಲ್ಲಿ ಅಂದಾಜು 10 ಚಮಚ ಸಕ್ಕರೆ ಇರುತ್ತದೆ. ಈ ಪಾನೀಯವನ್ನು ಕುಡಿದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿ, ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಏರುಪೇರು ಮಾಡುತ್ತದೆ. ಇದರಿಂದಾಗಿ ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧಕ ಸಮಸ್ಯೆ ಉಂಟಾಗುತ್ತದೆ.
ಅಲ್ಲದೇ ಹೆಚ್ಚಾಗಿ ಸಕ್ಕರೆ ಅಂಶವಿರುವ ಪಾನೀಯಗಳನ್ನು ಸೇವಿಸಿದರೆ ತೂಕ ಹೆಚ್ಚಳವಾಗುತ್ತದೆ ಮತ್ತು ಇತರೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾಡಲು ಆರಂಭವಾಗುತ್ತದೆ.
ಕೆಫಿನ್
ಹೆಚ್ಚಿನ ಸೋಡಾಗಳಲ್ಲಿ ಕೆಫಿನ್ ಅಂಶವಿರುತ್ತದೆ. ಇದು ಕ್ಯಾನ್ಸರ್, ಸ್ತನದಲ್ಲಿ ಗಡ್ಡೆ, ಹೃದಯ ಸಂಬಂಧಿ ಸಮಸ್ಯೆ, ರಕ್ತದೊತ್ತಡ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುವುದು. ಆದ್ದರಿಂದ ಹೆಚ್ಚು ಸೋಡಾ ಅಂಶವಿರುವ ಪಾನೀಯ ಸೇವಿಸುವವರು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.
ಫಾಸ್ಪರಸ್ ಆಮ್ಲ
ಸೋಡಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಾಸ್ಪರಸ್ ಆಮ್ಲದ ಅಂಶ ಇರುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟುಮಾಡುತ್ತದೆ. ಇದರಿಂದಾಗಿ ಅಸ್ಥಿರಂಧ್ರತೆ, ದಂತಕುಳಿ ಮತ್ತು ಮೂಳೆಗಳ ಸಮಸ್ಯೆ ಬರುತ್ತದೆ.