ಮನುಷ್ಯನಿಗೆ ನಿದ್ರೆ ಬಹುಮುಖ್ಯವಾಗಿದ್ದು, ಪ್ರತಿನಿತ್ಯ 7 ರಿಂದ 9 ತಾಸು ಉತ್ತಮ ನಿದ್ದೆ ಬೇಕಾಗುತ್ತದೆ. ನಿದ್ರೆ ಸರಿಯಾಗಿ ಆದರೆ ಮಾತ್ರ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಜೊತಗೆ ನಮ್ಮ ಭಾವನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಮಾನಸಿಕವಾಗಿ ದಣಿಯುತ್ತೀರಿ ಜೊತೆಗೆ ಮುಂಗೋಪ, ಇಡೀ ದಿನ ಕಿರಿಕಿರಿಯಂತಹ ಸಮಸ್ಯೆಗಳು ಎದುರಾಗುತ್ತದೆ. ಜೊತೆಗೆ ಆಲಸ್ಯರಾಗುತ್ತೀರಿ. ಇದು ಮಾನಸಿಕ ತೊಂದರೆಯಾಗಿದ್ದರೆ, ದೈಹಿಕವಾಗಿ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತೀರಿ.
ಕೇಂದ್ರ ನರಮಂಡಲದ ಮೇಲೆ ಪರಿಣಾಮ: ಕೇಂದ್ರ ನರಮಂಡಲವು ದೇಹದ ಪ್ರಾಥಮಿಕ ಮಾಹಿತಿಯ ಹೆದ್ದಾರಿಯಾಗಿದೆ. ಇದು ಸರಿಯಾಗಿ ಕೆಲಸ ಮಾಡಲು ನಿದ್ದೆ ಅವಶ್ಯವಿರುತ್ತದೆ. ಆದರೆ ತೀವ್ರವಾದ ನಿದ್ರಾಹೀನತೆಯಿಂದಾಗಿ ನರಮಂಡಲದಲ್ಲಿ ಪ್ರಮುಖ ತೊಂದರೆ ಆಗುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ
Advertisement
Advertisement
ರೋಗ ನಿರೋಧಕ ಶಕ್ತಿ ಕಡಿಮೆ: ನಿದ್ರಾಹೀನತೆಯಿಂದ ನಿಮ್ಮ ದೇಹವು ರೋಗ ನಿರೋಧಕಶಕ್ತಿಯನ್ನು ಬಲಪಡಿಸುವುದನ್ನು ನಿಲ್ಲಿಸುತ್ತದೆ. ನೀವು ಪ್ರತಿನಿತ್ಯ ಸಾಕಷ್ಟು ನಿದ್ದೆಯನ್ನು ಪಡೆಯದಿದ್ದರೆ, ನಿಮ್ಮ ದೇಹವು ಸೋಂಕು ಹಾಗೂ ಬ್ಯಾಕ್ಟಿರಿಯಾ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ರೋಗದಿಂದ ಚೇತರಿಸಿಕೊಳ್ಳಲು ಅಧಿಕ ಸಮಯ ಬೇಕಾಗುತ್ತದೆ. ಇಷ್ಟೇ ಅಲ್ಲದೇ ದೀರ್ಘಾವಧಿ ನಿದ್ರಾಹೀನತೆಯಿಂದಾಗಿ ಮಧುಮೇಹ ಹಾಗೂ ಹೃದ್ರೋಗದಂತಹ ಕಾಯಿಲೆಗಳು ಬರುವ ಸಂಭವವಿರುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ
Advertisement
Advertisement
ಉಸಿರಾಟದ ಮೇಲೆ ಪರಿಣಾಮ: ರಾತ್ರಿ ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ ಶೀತ ಹಾಗೂ ಜ್ವರದ ಸಮಸ್ಯೆಯಿಂದ ಬಳಲುವ ಪರಿಸ್ಥಿತಿ ಬರಬಹುದು. ಇದರಿಂದಾಗಿ ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳು ಎದುರಾಗಬಹುದು. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
ಜಿರ್ಣಾಂಗ ವ್ಯವಸ್ಥೆ: ನಿದ್ದೆ ಕಡಿಮೆ ಮಾಡುವುದರಿಂದ ಕೆಲವೊಮ್ಮೆ ನೀವು ವ್ಯಾಯಾಮ ಮಾಡುವಾಗ ಆಯಾಸವಾಗುತ್ತದೆ. ಇದರಿಂದಾಗಿ ತೂಕವು ಹೆಚ್ಚಾಗುತ್ತದೆ ಜೊತೆಗೆ ಜಿರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀಳುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
ಹೃದ್ರೋಗ ಕಾಯಿಲೆ: ಸಾಕಷ್ಟು ನಿದ್ದೆ ಮಾಡದಿದ್ದರೆ ಜನರು ಹೃದಯ ರಕ್ತನಾಳದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ಅಧ್ಯಯನದ ಪ್ರಕಾರ ನಿದ್ರಾಹೀನತೆಯಿಂದಾಗಿ ಹೃದಯಾಘಾತ ಮತ್ತು ಸ್ಟ್ರೋಕ್‍ನಂತಹ ಕಾಯಿಲೆಗಳು ಎದುರಾಗುವ ಸಂಭವವಿರುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು