ಢಾಕಾ: ಇತ್ತೀಚೆಗೆ ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ (Harmanpreet Kaur) ಈಗ ನಿಷೇಧದ ಭೀತಿ ಎದುರಾಗಿದೆ.
ಅನುಚಿತ ವರ್ತನೆ ತೋರಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ದಂಡ ವಿಧಿಸುವ ಸಾಧ್ಯತೆಯಿದೆ. ಬಾಂಗ್ಲಾದೇಶ ವಿರುದ್ಧ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದ ಶುಲ್ಕದಲ್ಲಿ ಶೇ.75 ರಷ್ಟು ದಂಡ ಹಾಗೂ 4 ಡಿಮೆರಿಟ್ ಅಂಕಗಳನ್ನು ನೀಡುವ ಸಾಧ್ಯತೆಯಿದೆ. ಈಗಾಗಲೇ 3 ಡಿಮೆರಿಟ್ ಅಂಕಗಳನ್ನು ನೀಡಲು ಶಿಫಾರಸ್ಸು ಮಾಡಲಾಗಿದೆ ಇದರಿಂದ ಏಷ್ಯನ್ ಗೇಮ್ಸ್‌ನಲ್ಲೂ ಟೀಂ ಇಂಡಿಯಾ (Team India) ಮಹಿಳಾ ತಂಡಕ್ಕೆ ನಷ್ಟವಾಗಲಿದೆ.
ಏಕೆಂದರೆ ಐಸಿಸಿ ನಿಯಮಗಳ ಪ್ರಕಾರ, 24 ತಿಂಗಳಲ್ಲಿ ಯಾವುದೇ ಪ್ಲೇಯರ್ 4 ಡಿಮೆರಿಟ್ ಅಂಕಗಳನ್ನ ಪಡೆದುಕೊಂಡರೆ, ಅಂತಹ ಆಟಗಾರರನ್ನ 1 ಟೆಸ್ಟ್, 2 ಏಕದಿನ ಪಂದ್ಯ ಅಥವಾ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ಅಮಾನತುಗೊಳಿಸಲಾಗುತ್ತದೆ. ಇವುಗಳಲ್ಲಿ ಮುಂದೆ ಯಾವುದು ನಡೆಯುತ್ತದೆಯೋ ಅಂತಹ ಪಂದ್ಯಗಳಿಗೆ ಆಟಗಾರರನ್ನ ನಿಷೇಧಿಸಲಾಗುತ್ತದೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್ ವಿವಾದ – ಆಟಗಾರರ ನಡುವೆ ಟಾಕ್ ಫೈಟ್
ಈಗಾಗಲೇ ಭಾರತೀಯ ಮಹಿಳಾ ತಂಡವು ಏಷ್ಯನ್ ಗೇಮ್ಸ್ (Asian Games) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಮುಂದಿನ ಪಂದ್ಯಗಳು ಸೆಮಿಸ್‌ಗೆ ನಡೆಯುವ ಪೈಪೋಟಿ ಆಗಿರುವುದರಿಂದ ನಿರ್ಣಾಯಕವಾಗಿರುತ್ತದೆ. ಹರ್ಮನ್‌ಪ್ರೀತ್ ಕೌರ್‌ಗೆ 4 ಡಿಮೆರಿಟ್ ಪಾಯಿಂಟ್‌ಗಳ ಪೆನಾಲ್ಟಿ ನೀಡಿದರೆ, ಅವರು ಮುಂದಿನ ಎರಡು ನಿರ್ಣಾಯಕ ಪಂದ್ಯಗಳನ್ನ ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಭಾರತ ಅರ್ಹತೆ ಗಳಿಸಿದರೆ, ಫೈನಲ್ ಪಂದ್ಯಕ್ಕೆ ಲಭ್ಯವಿರುತ್ತಾರೆ.
ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ನೀಡಿದ್ದ 226 ರನ್ ಗುರಿ ಹಿಂಬಾಲಿಸಿದ್ದ ಭಾರತ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದ ಹರ್ಮನ್‌ಪ್ರೀತ್ ಕೌರ್ ಅವರು, 14 ರನ್‌ಗಳಿಸಿ ಆಡುತ್ತಿದ್ದರು. ಈ ವೇಳೆ 34ನೇ ಓವರ್‌ನಲ್ಲಿ ನಹಿಡಾ ಅಖ್ತರ್ ಅವರ ಎಸೆತ ಹರ್ಮನ್ ಪ್ರೀತ್‌ಕೌರ್ ಅವರ ಪ್ಯಾಡ್‌ಗೆ ಬಡಿಯಿತು. ಆನ್‌ಫೀಲ್ಡ್ ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ತೀರ್ಪು ನೀಡಿದರು. ಇದರಿಂದ ಅಸಮಾಧಾನಗೊಂಡ ಕೌರ್ ಬ್ಯಾಟ್‌ಗೆ ಕಾಟ್ ಆಗಿದೆ ಎಂದು ತೋರಿಸುತ್ತಲೇ ಬ್ಯಾಟ್‌ನಿಂದ ಸ್ಟಂಪ್ಸ್ಗೆ ಹೊಡೆದು ಅಸಮಾಧಾನ ಹೊರಹಾಕಿದ್ರು. ಅಂತಿಮವಾಗಿ ಈ ಪಂದ್ಯ ಟೈ ಆಯಿತು. ಆ ಮೂಲಕ ಏಕದಿನ ಸರಣಿಯ ಪ್ರಶಸ್ತಿಯನ್ನು ಎರಡೂ ತಂಡಗಳು ಹಂಚಿಕೊಂಡವು.
ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿಯೂ ಮಾತನಾಡಿದ ಹರ್ಮನ್‌ಪ್ರೀತ್ ಕೌರ್ ಅವರು, ನೇರವಾಗಿ ಅಂಪೈರ್‌ಗಳ ವಿರುದ್ಧ ಕಿಡಿ ಕಾರಿದರು. ಈ ಪಂದ್ಯದಿಂದ ನಾವು ಸಾಕಷ್ಟು ಕಲಿತಿದ್ದೇನೆ. ಮುಂದಿನ ಸಲ ಇಲ್ಲಿಗೆ ಬಂದಾಗ, ಇದಕ್ಕೆ ತಕ್ಕಂತೆ ಆಡುತ್ತೇವೆಂದು ಹೇಳಿದ್ದರು. ಇದನ್ನೂ ಓದಿ: Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್ ಜಯದೊಂದಿಗೆ ಚಾಂಪಿಯನ್ ಪಟ್ಟಕ್ಕೇರಿದ ಪಾಕಿಸ್ತಾನ
ಇಷ್ಟು ಸಾಲದ್ದಕ್ಕೆ ಬಾಂಗ್ಲಾದೇಶ ತಂಡದ ನಾಯಕಿ ನಿಗರ್ ಸುಲ್ತಾನಾ ಅವರೊಂದಿಗೆ ಟ್ರೋಫಿ ಪಡೆಯುವಾಗ ಅನುಚಿತವಾಗಿ ವರ್ತಿಸಿದರು. ಪಂದ್ಯದ ನಂತರ ಫೋಟೋ ತೆಗೆದುಕೊಳ್ಳಲು ಅಂಪೈರ್‌ಗಳನ್ನ ಕರೆಯುವಂತೆ ಹರ್ಮನ್, ಬಾಂಗ್ಲಾದೇಶ ನಾಯಕಿಯನ್ನು ಕೇಳಿದರು. ಈ ಪಂದ್ಯವನ್ನು ಟೈ ಆಗುವಂತೆ ಮಾಡಿದ ಅವರು ಇಲ್ಲಿ ಇರಬೇಕು ಎಂದು ವ್ಯಂಗ್ಯವಾಡಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]