ಡರ್ಬಿ: ಸಿಕ್ಸರ್, ಬೌಂಡರಿಗಳ ಸುರಿಮಳೆ. ಕೊನೆಯ 16 ಓವರ್ ಗಳಲ್ಲಿ ಭಾರತ ಗಳಿಸಿದ್ದು 179 ರನ್. ಇದು ವಿಶ್ವಕಪ್ ಕ್ರಿಕೆಟ್‍ನ ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಹರ್ಮನ್ ಪ್ರೀತ್ ಕೌರ್ ಅವರ ಬ್ಯಾಟಿಂಗ್ ಆರ್ಭಟದ ಝಲಕ್.
ಟಾಸ್ ಗೆದ್ದು ಬ್ಯಾಟ್ ಮಾಡಿದ ಭಾರತದ ಪರವಾಗಿ ಹರ್ಮನ್ ಪ್ರೀತ್ ಅವರು ಸ್ಫೋಟಕ ಔಟಾಗದೇ 171 ರನ್(115 ಎಸೆತ) ಸಿಡಿಸುವ ಮೂಲಕ 42 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತ್ತು
Advertisement
ವಿಶೇಷ ಏನೆಂದರೆ 90 ಎಸೆತದಲ್ಲಿ ಶತಕ ಹೊಡೆದ ಹರ್ಮನ್‍ಪ್ರೀತ್ ಕೌರ್ ನಂತರ 25 ಎಸೆತದಲ್ಲಿ 71 ರನ್ ಚಚ್ಚಿದ್ದರು. ಇವರ ಈ ವಿಹಂಗಮ ಇನ್ನಿಂಗ್ಸ್ ನಲ್ಲಿ 20 ಬೌಂಡರಿ, 7 ಸಿಕ್ಸರ್ ಗಳು ಸಿಡಿಯಲ್ಪಟ್ಟಿತ್ತು.
Advertisement
64 ಎಸೆತದಲ್ಲಿ 50 ರನ್ ಗಳಿಸಿದ್ದ ಇವರು ನಂತರ 26 ಎಸೆತದಲ್ಲಿ ಶತಕ ಹೊಡೆದಿದ್ದರು.64 ಎಸೆತದಲ್ಲಿ 50 ರನ್ ಗಳಿಸಿದ್ದ ಇವರು ನಂತರ 26 ಎಸೆತದಲ್ಲಿ ಶತಕ ಹೊಡೆದಿದ್ದರು. 171 ರನ್‌ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ಐದನೇ ಆಟಗಾರ್ತಿಯಾಗಿ ಕೌರ್ ಹೊಮ್ಮಿದ್ದಾರೆ.
Advertisement
ಸಿಟ್ಟಿನಲ್ಲಿ ಶತಕ: 35 ನೇ ಓವರ್ ನಲ್ಲಿ ಕೌರ್ 98 ರನ್ ಗಳಿಸಿ ಸ್ಟ್ರೈಕ್ ನಲ್ಲಿದ್ದರು. ಈ ಕೊನೆಯ ಎಸೆತದಲ್ಲಿ ಕೌರ್ ಸಿಂಗಲ್ ರನ್ ತೆಗೆಯಲು ಎಡಗಡೆ ಹೊಡೆದಿದ್ದರು. ಈ ವೇಳೆ ದೀಪ್ತಿ ಶರ್ಮಾ ಎರಡು ರನ್ ಓಡಿದ್ದರು. ಈ ವೇಳೆ ಫೀಲ್ಡರ್ ಎಸೆದ ಬಾಲ್ ನೇರವಾಗಿ ಬೌಲರ್ ಕೈಗೆ ಸಿಕ್ಕಿತ್ತು. ಈ ಸಂದರ್ಭದಲ್ಲಿ ಕೌರ್ ಸ್ಟ್ರೈಕ್ ನತ್ತ ಓಡುತ್ತಿದ್ದರು. ಇದನ್ನು ನೋಡಿದ ಕೂಡಲೇ ಬೌಲರ್ ಬೀಮ್ಸ್ ನೇರವಾಗಿ ಸ್ಟ್ರೈಕ್ ನಲ್ಲಿರುವ ವಿಕೆಟ್ ಗೆ ತ್ರೋ ಮಾಡಿದ್ರು. ಪರಿಣಾಮ ಔಟ್ ನಿರ್ಧಾರ ಮೂರನೇ ಅಂಪೈರ್ ಹೋಯ್ತು. ಕೂಡಲೇ ಸಿಟ್ಟಾದ ಕೌರ್ ಹೆಲ್ಮೆಟ್ ಎಸೆದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು. ಮೂರನೇ ಅಂಪೈರ್ ನಟೌಟ್ ಎಂದು ತೀರ್ಪು ನೀಡಿದ್ರು. ಶತಕ ಪೂರ್ಣ ಗೊಳಿಸಿದ್ದರೂ ಕೌರ್ ಬ್ಯಾಟನ್ನು ಮೇಲಕ್ಕೆ ಎತ್ತಿರಲಿಲ್ಲ. 150 ರನ್ ಗಳಿಸಿದಾಗ ಬ್ಯಾಟ್ ಮೇಲಕ್ಕೆ ಎತ್ತಿ ಸಂಭ್ರಮಿಸಿದರು. ಕೊನೆಯ 23 ಎಸೆತದಲ್ಲಿ 71 ರನ್( 4, 6, 6, 4, 4, 2, 0, 4, 4, 0, 6, 4, 1, 4, 1, 1, 6, 6, 1, 1, 4, 1, 1 ) ಚಚ್ಚಿದ್ದರು.
Advertisement
ಭಾರತದ ಪರವಾಗಿ ಮಿಥಾಲಿ ರಾಜ್ 36 ರನ್(61 ಎಸೆತ, 2 ಬೌಂಡರಿ) ದೀಪ್ತಿ ಶರ್ಮಾ 25 ರನ್( 35 ಎಸೆತ, 1 ಬೌಂಡರಿ), ವೇದ ಕೃಷ್ಣ ಮೂರ್ತಿ 16 ರನ್(10 ಎಸೆತ,2 ಬೌಂಡರಿ) ಗಳಿಸಿದರು. ಮಳೆ ಬಂದ ಕಾರಣ 50 ಓವರ್ ಗಳ ಪಂದ್ಯವನ್ನು 42 ಓವರ್ ಗಳಿಗೆ ಇಳಿಸಲಾಯಿತು.
ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ವೈಭವ ಹೀಗಿತ್ತು
50 ರನ್ – 64 ಎಸೆತ
100 ರನ್ – 90 ಎಸೆತ
150 ರನ್ – 107 ಎಸೆತ
171 ರನ್ – 115 ಎಸೆತ
A Harmanpreet special! Kaur hits a stunning 171* off 115 as India post 281/4 against Australia in the #WWC17 semi-final! #AUSvIND pic.twitter.com/VXoUZ6X3C8
— ICC Cricket World Cup (@cricketworldcup) July 20, 2017
Take a bow, @ImHarmanpreet ????
Mobbed by her teammates & rightly so, what an innings!#AUSvIND #WWC17 pic.twitter.com/xAOtu7J4WQ
— ICC Cricket World Cup (@cricketworldcup) July 20, 2017
Harmanpreet you rockstar. Simply awesome – @ImHarmanpreet @BCCIWomen #TeamIndia #AUSvIND pic.twitter.com/olwm0UHjZc
— Ravi Shastri (@RaviShastriOfc) July 20, 2017
???????? The perfect start! ✋️????#AUSvIND #WWC17 pic.twitter.com/Z760w8kg89
— ICC Cricket World Cup (@cricketworldcup) July 20, 2017
One Word: Dabbangg !!#HarmanpreetKaur pic.twitter.com/6pqtuuZijq
— Godman Chikna (@Madan_Chikna) July 20, 2017
https://twitter.com/AkashKu64782024/status/888073567191146496
Indian Women scored 179 in the last 16 overs of the match against Australia Women. #WWC17 #indwvsausw pic.twitter.com/KK3nwnlJhl
— CricTracker (@Cricketracker) July 20, 2017
What A Knock by Harmanpreet Kaur#WWC17 #IndvAus pic.twitter.com/XkK16F42vw
— RVCJ Media (@RVCJ_FB) July 20, 2017