ಗಯಾನ: ವಿಶ್ವ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್, ಪಂದ್ಯ ಆರಂಭ ಮುನ್ನ ರಾಷ್ಟ್ರಗೀತೆ ಗೌರವ ಸಲ್ಲಿಸುವ ಕಾರ್ಯಕ್ರಮದ ವೇಳೆ ಬಾಲಕಿಯನ್ನು ಹೊತ್ತು ಸಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶ್ವಕಪ್ ನಲ್ಲಿ ಯಾವುದೇ ಅಂತರಾಷ್ಟ್ರೀಯ ಪಂದ್ಯ ಆರಂಭ ಆಗುವುದಕ್ಕೂ ಮುನ್ನ ಎರಡು ದೇಶಗಳ ರಾಷ್ಟ್ರಗೀತೆ ಗೌರವ ಸಲ್ಲಿಸುವುದು ಸಾಂಪ್ರದಾಯ. ಇದರಂತೆ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಯೂ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಗಿತ್ತು. ಆದರೆ ಈ ವೇಳೆ ಆಟಗಾರ್ತಿಯರಿಗೆ ಸ್ವಾಗತ ಕೋರಲು ಆಗಮಿಸಿದ್ದ ಪುಟ್ಟ ಬಾಲಕಿ ಬಿಸಿಲಿನ ತಾಪಕ್ಕೆ ಬಳಲಿದ್ದಳು.
Advertisement
https://twitter.com/NaaginDance/status/1061651193766662144?
Advertisement
ತಮ್ಮ ಎದುರು ನಿಂತಿದ್ದ ಬಾಲಕಿ ಬಿಸಿಲಿನ ತಾಪಕ್ಕೆ ಬಳಲಿದ್ದನ್ನು ಗಮನಿಸಿದ ಕೌರ್ ತಕ್ಷಣ ಆಕೆಯನ್ನು ಹೊತ್ತು ಸಾಗಿದರು. ಬಳಿಕ ಮೈದಾನದ ಸಿಬ್ಬಂದಿ ಬಾಲಕಿಯನ್ನು ಪಡೆದರು. ಪಂದ್ಯದ ಆರಂಭದ ವೇಳೆಗೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದ ಕಾರಣ ಬಾಲಕಿಗೆ ಹೀಗಾಗಿದೆ. ಸದ್ಯ ಕೌರ್ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
Advertisement
ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಡೆಸುತ್ತಿರುವ ಹರ್ಮನ್ ಪ್ರೀತ್ ಕೌರ್ ಲೀಗ್ ಹಂತದ 2 ಪಂದ್ಯಗಳಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ವೇಗದ ಶತಕದ ದಾಖಲೆ ನಿರ್ಮಿಸಿದ್ದರು. ಅಲ್ಲದೇ ಪಾಕಿಸ್ತಾನ ವಿರುದ್ಧದ ಭಾನುವಾರ ನಡೆದ ಪಂದ್ಯದಲ್ಲೂ ಅರ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews