ನವದೆಹಲಿ: ವಿಶ್ವಕಪ್ ಗೆದ್ದು ಚಾಂಪಿಯನ್ ಆದ ಖುಷಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ (Team India) ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಟ್ರೋಫಿಯ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಭಾರತ ಮಹಿಳಾ ತಂಡವನ್ನು ಏಕದಿನ ವಿಶ್ವಕಪ್‌ನಲ್ಲಿ ಗೆಲುವಿನತ್ತ ಮುನ್ನಡೆಸಿ ಚಾಂಪಿಯನ್ ಆದ ಕೆಲವೇ ದಿನಗಳಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ತಮ್ಮ ತೋಳಿನ ಮೇಲೆ ವಿಶ್ವಕಪ್‌ನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.ಇದನ್ನೂ ಓದಿ: ಮೋದಿ ಜೊತೆ ಚಾಂಪಿಯನ್ನರು – ಸಹಿಹಾಕಿದ ಜೆರ್ಸಿ ಗಿಫ್ಟ್ ಕೊಟ್ಟ ಟೀಂ ಇಂಡಿಯಾ
ಇದು ಕೇವಲ ನನ್ನ ಚರ್ಮದ ಮೇಲೆ ಮಾತ್ರವಲ್ಲ, ಶಾಶ್ವತವಾಗಿ ನನ್ನ ಹೃದಯದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ನಿನಗಾಗಿ ಮೊದಲ ದಿನದಿಂದಲೂ ಕಾಯುತ್ತಿದ್ದೆ. ಇದೀಗ ಪ್ರತಿದಿನವೂ ನಿನ್ನ ನೋಡುತ್ತಲೇ ನನಗೆ ಬೆಳಗಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
View this post on Instagram
Feeling of being a world champion 🏆
Support of an entire nation 🇮🇳
Power of self-belief 🙌@ImHarmanpreet is 𝙡𝙞𝙫𝙞𝙣𝙜 𝙩𝙝𝙚 𝙙𝙧𝙚𝙖𝙢 ✨
🎥 In Conversation with #TeamIndia‘s World Cup-winning captain 👌 – By @mihirlee_58 #WomenInBlue | #CWC25 | #Champions pic.twitter.com/ojubOBgLGk
— BCCI Women (@BCCIWomen) November 4, 2025
ಇನ್ನೂ ಬಿಸಿಸಿಐ ಹರ್ಮನ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತಮ್ಮ ಕ್ರಿಕೆಟ್ ಪಯಣ, ಚಾಂಪಿಯನ್ ಆಗುವ ಕನಸು ಎಲ್ಲದರ ಕುರಿತು ಮಾತನಾಡಿದ್ದಾರೆ. 2025ರ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. 299ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು 45.3 ಓವರ್‌ಗಳಲ್ಲಿ 246ರನ್‌ಗೆ ಆಲೌಟ್ ಮಾಡಿತು.ಇದನ್ನೂ ಓದಿ:ಅಮನ್‌ಜೋತ್ ಕೌರ್‌ಗೆ ಮೊದಲ ಕೋಚ್ ಆಗಿದ್ದ ಅಜ್ಜಿಗೆ ಹೃದಯಾಘಾತ – ವಿಶ್ವಕಪ್ ನಡೆಯುತ್ತಿದ್ದರಿಂದ ವಿಷ್ಯ ತಿಳಿಸದ ಕುಟುಂಬ

